ವೃದ್ಧೆ ನಾಪತ್ತೆ

ಬಂಟ್ವಾಳ, ಆ.೧೪- ಮನೆಯ ಜಗುಲಿಯಲ್ಲಿ ಕುಳಿತು ಕೊಂಡಿದ್ದ ಅಜ್ಜಿಯೋರ್ವರು ದಿಡೀರ್ ನಾಪತ್ತೆಯಾದ ಘಟನೆ ಪಾಣೆಮಂಗಳೂರುವಿನಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಬೊಳಂಗಡಿ ನಿವಾಸಿ ಕಮಲಾ (೮೦) ಅವರು ನಾಪತ್ತೆಯಾದ ಮಹಿಳೆ. ಅ. ೧೧ ರಂದು ಶನಿವಾರ ಮನೆಯ ಬೆಳಿಗ್ಗೆ ಜಗುಲಿಯಲ್ಲಿ ಕುಳಿತು ಕೊಂಡಿದ್ದ ಬಳಿಕ ಕಾಣದೆ ನಾಪತ್ತೆಯಾಗಿದ್ದಾರೆ ಎಂದು ಅವರ ಮಗ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇವರು ಕಾಣ ಸಿಕ್ಕಲ್ಲಿ ನಗರ ಠಾಣೆಯನ್ನು ಸಂಪರ್ಕಿಸಲು ತಿಳಿಸಿದ್ದಾರೆ.

Leave a Comment