ವೃದ್ಧಿಮನ್ ಸಹಾಗೆ ಬಿಸಿಸಿಐ ಬುಲಾವ್

ನವದೆಹಲಿ, ಜ.೨೨- ಟೀಂ ಇಂಡಿಯಾಗೆ ಗಾಯಾಳು ಸಮಸ್ಯೆ ಕಾಡುತ್ತಿರುವ ಹಿನ್ನಲೆಯಲ್ಲಿ ಸ್ಟಾರ್ ವಿಕೆಟ್ ಕೀಪರ್‌ಮ ಬ್ಯಾಟ್ಸ್‌ಮನ್ ವೃದ್ಧಿಮನ್ ಸಹಾ ಅವರಿಗೆ ಬಿಸಿಸಿಐನಿಂದ ಬುಲಾವ್ ಬಂದಿದೆ.

ಟೀಂ ಇಂಡಿಯಾಕ್ಕೆ ಆಡಲು ಅವಕಾಶ ಸಿಕ್ಕಿರುವ ಅವರಿಗೆ ದೆಹಲಿ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ರಣಜಿ ಟೂರ್ನಿಯ ಪಂದ್ಯದಲ್ಲಿ ಆಡದಂತೆ ಬಿಸಿಸಿಐ ತಿಳಿಸಿದೆ.

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಟೆಸ್ಟ್ ಫಾರ್ಮೆಟ್‌ನ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಅವರಿಗೆ ರಣಜಿ ಪಂದ್ಯದಿಂದ ವಿಶ್ರಾಂತಿ ನೀಡುವಂತೆ ಸೂಚಿಸಲಾಗಿದೆ. ಪಶ್ಷಿಮ ಬಂಗಾಳ ತಂಡವನ್ನು ರಣಜಿಯಲ್ಲಿ ಪ್ರತಿನಿಧಿಸುವ ಸಾಹಾ ಮುಂದಿನ ರಣಜಿ ಪಂದ್ಯದಿಂದ ವಿಶ್ರಾಂತಿಯನ್ನು ಪಡೆಯಲಿದ್ದಾರೆ.

ಈ ಟೆಸ್ಟ್ ಸರಣಿಗೆ ಫಿಟ್ ಇರಬೇಕಾದ ಹಿನ್ನೆಲೆಯಲ್ಲಿ ವೃದ್ಧಿಮಾನ್ ಸಾಹಾ ಮುಂದಿನ ರಣಜಿ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮುಂದಿನ ಭಾನುವಾರದಿಂದ ರಣಜಿ ಟೂರ್ನಿಯಲ್ಲಿ ಪಶ್ಚಿಮ ಬಂಗಾಳ ತಂಡ ಡೆಲ್ಲಿ ತಂಡವನ್ನು ಎದುರಿಸಲಿದೆ. ಮತ್ತೊಂದು ಕಡೆ ಟೀಮ್ ಇಂಡಿಯಾದ ಅನುಭವಿ ವೇಗಿ ಇಶಾಂತ್ ಶರ್ಮಾ ರಣಜಿ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಪಾದದ ಗಾಯಕ್ಕೊಳಗಾಗಿರುವ ಇಶಾಂತ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ತಂಡದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಪೃಥ್ವಿ ಶಾ ಅವರಿಗೂ ಟೀಂ ಇಂಡಿಯಾ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ಟಿ೨೦ ಸರಣಿಯನ್ನಾಡಲು ಈಗಾಗಲೆ ನ್ಯೂಜಿಲ್ಯಾಂಡ್‌ಗೆ ಪ್ರವಾಸಕ್ಕೆ ತೆರಳಿದೆ. ೨೪ರಂದು ಸರಣಿ ಮೊದಲ ಪಂದ್ಯ ನಡೆಯಲಿದೆ. ಐದು ಟಿ೨೦ ಪಂದ್ಯದ ಬಳಿಕ ೩ ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಅದಾದ ಬಳಿಕ ನ್ಯೂಜಿಲ್ಯಾಂಡ್ ತಂಡದ ವಿರುದ್ಧವೇ ೨ ಟೆಸ್ಟ್ ಪಂದ್ಯ ನಡೆಯಲಿದೆ.

Leave a Comment