ವೃದ್ಧನನ್ನ ಹತ್ಯೆಗೈದು ರುಂಡ ಸಮೇತ ಪೊಲೀಸ್ ಠಾಣೆಗೆ ಹಾಜರು

ಮೈಸೂರು,ಸೆ,21- ಯುವಕರಿಬ್ಬರು ಕ್ಷುಲ್ಲಕ ಕಾರಣಕ್ಕೆ  ವೃದ್ದರೊಬ್ಬರನ್ನ ಹತ್ಯೆ ಮಾಡಿ ರುಂಡವನ್ನು ಪೊಲೀಸ್ ಠಾಣೆಗೆ ತಂದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಟಿ. ನರಸೀಪುರ ತಾಲೂಕು ಚಾಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಂಪೇಗೌಡ (65) ಕೊಲೆಯಾದ ವೃದ್ಧ. ಚೇತನ್ ಹಾಗೂ ಮಧು ಎಂಬುವವರೇ ಈ ಕೃತ್ಯವೆಸಗಿರುವುದು. ವೃದ್ಧ ಕೆಂಪೇಗೌಡರು ಮಲಗಿದ್ದ  ವೇಳೆ ಅಲ್ಲಿಗೆ ಬಂದ ಮಧು ಮತ್ತು ಚೇತನ್ ವೃದ್ಧನನ್ನ ಹತ್ಯೆ ಮಾಡಿ ಬಳಿಕ ರುಂಡದ ಜತೆ ಬನ್ನೂರು ಪೊಲೀಸ್ ಠಾಣೆಗೆ ಹಾಜಾರಗಿದ್ದಾರೆ.  ಕ್ಷುಲ್ಲಕ ವಿಚಾರಕ್ಕೆ ಸಂಬಂಧಸಿದಂತೆ ಕೊಲೆ ಮಾಡಿದ್ದಾರೆ. ಎನ್ನಲಾಗಿದೆ

ಘಟನೆ ಸಂಬಂಧ  ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Comment