ವೀರಶೈವ ಸಮಾಜ ಸಂಘಟನೆ ಪುನಾರಂಭ: ಅರುಣಕುಮಾರ ಪಾಟೀಲ

 

ಕಲಬುರಗಿ,ನ.19- ಜಿಲ್ಲಾ ವೀರಶೈವ ಸಮಾಜ ಯಾವುದೇ ಸಂಸ್ಥೆಯ ವಿರುದ್ಧವು ಅಲ್ಲಾ ಹಾಗೂ ಆ ಸಂಸ್ಥೆಗೆ ಪರ್ಯಾಯವೂ ಅಲ್ಲ ಕಳೆದ 1979ರಲ್ಲಿ ನೊಂದಾಣಿಗೊಂಡಿರುವ ಕಲಬುರಗಿ ಜಿಲ್ಲಾ ವೀರಶೈವ ಸಮಾಜ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅವರ ಮಾರ್ಗದರ್ಶನದಲ್ಲಿ ಪುನರ ಆರಂಭವಾಗಿದೆ ಎಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಎಸ್.ಪಾಟೀಲ ಇಂದಿಲ್ಲಿ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2012ರಲ್ಲಿ ಈ ಸಂಘಟನೆಯಲ್ಲಿ ಸಾಕಷ್ಟು ಜನರು ಸದಸ್ಯತ್ವ ಪಡೆದಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಈ ಸಂಘಟನೆಯ ಕಾರ್ಯಚಟುವಟಿಕೆ ಕಾರಣಾಂತರದಿಂದ ಕಡಿಮೆಯಾಗಿತ್ತು. ಪೂಜ್ಯ ಡಾ.ಅಪ್ಪಾ ಅವರು, ಮೊನ್ನೆ ದಿನಾಂಕ 16/11/2019ರಂದು ಇದೇ ಸಂಘಟನೆಗೆ ಹೊಸದಾಗಿ ತಮ್ಮ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನಿಯೋಜಿಸಿ ಜಿಲ್ಲೆಯಲ್ಲಿ ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುವಂತೆ ಆಶೀರ್ವಾದಿಸಿದ್ದಾರೆ ಎಂದರು.

ಅಂದು ಅಖಿಲ ಭಾರತ ವೀರಶೈವ ಮಹಾಸಭೆಯ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಧಿಮಂತ ನಾಯಕ ಭೀಮಣ್ಣ ಖಂಡ್ರೆ ಅವರು ಅಧ್ಯಕ್ಷರಾಗಿದ್ದಾಗ ನಾಡಿನಾದ್ಯಂತ ಸಂಚರಿಸಿ ಸದಸ್ಯತ್ವ ಮಾಡಿಸಿ ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ರಚಿಸಿದ್ದರು. ಆದರೇ ಆಗಲೇ ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಆಯಾ ವೀರಶೈವ ಸಮಾಜಗಳಿದ್ದವು. ಅವುಗಳು ಅಧಿಕೃತವಾಗಿ ಅಖಿಲ ಭಾರತ ವೀರಶೈವ ಮಹಾಸಭೆಯೋಂದಿಗೆ ವೀಲಿನಗೋಂಡಿರಲಿಲ್ಲ. ಹಾಗಾಗಿ ಈಗಲು ಬಹುತೇಕ ಜಿಲ್ಲೆ, ತಾಲೂಕುಗಳಲ್ಲಿ ಸಮಾಜದ ಸಂಘಟನೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಂತೆ ಇಲ್ಲಿನ ಕಲಬುರಗಿ ಜಿಲ್ಲಾ ವೀರಶೈವ ಸಮಾಜ ಅಧಿಕೃತವಾಗಿ ನೊಂದಾಣಿ ಹೊಂದಿರುವ ಸಂಘಟನೆಯಾಗಿದೆ.

ವೀರಶೈವ ಸಮಾಜದ ಅಭಿವೃದ್ದಿ ಮತ್ತು ಕಲ್ಯಾಣಕ್ಕಾಗಿ ಸಮಾಜವನ್ನು ಐಕ್ಯತೆಯಡಿ ಒಂದುಗೊಡಿಸುವ ಉದ್ದೆಶದಿಂದ ಜಿಲ್ಲೆಯ ಮಠಾಧಿಶರು ನೂತನ ಪದಾಧಿಕಾರಗಿಳನ್ನು ಮತ್ತು ಆಡಳಿತ ಮಂಡಳಿ ಸದಸ್ಯರನ್ನು ಆಯ್ಕೆಮಾಡಿದ್ದಾರೆ ಎಂದು ಅರುಣಕುಮರ ಪಾಟೀಲ ಅವರು ಹೇಳಿದರು.

ಈ ಸಂಘಟನೆಯ ಧ್ಯೆಯ ಉದ್ದೇಶಗಳೆಂದರೆ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸ್ಕಾಲರಶಿಪ್ ನೀಡುವುದು, ವಸತಿ ನಿಲಯದ ಸವಲತ್ತುಗಳನ್ನು ಕಲ್ಪಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಿಸುವುದು, ಗ್ರಾಮೀಣ ಮಟ್ಟದಲ್ಲಿ ಸಮಾಜವನ್ನು ಜಾಗೃತಿ ಗೊಳಿಸಿ ಅವರ ಕುಂದು ಕೊರತೆಗಳನ್ನು ಅಲಿಸುವುದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಮತ್ತು ಅನ್ಯ ಸಮಾಗದವರೊಂದಿಗೆ ಭಾತೃತ್ವದ ಸಹಭಾಳ್ವೆಯನ್ನು ಬೆಳೆಸುವುದು, ನಗರ ಮತ್ತು ತಾಲೂಕು, ಹೊಬಳಿ ಮಟ್ಟದಲ್ಲಿ ಸಂಘಟನೆಯ ಅಧ್ಯಕ್ಷರನ್ನು ಆಯ್ಕೆ ಮಾಡುವುದು. ವಿದ್ಯಾರ್ಥಿ, ಯುವಕರ ಹಾಗೂ ಮಹಿಳಾ ಘಟಕವನ್ನು ಪ್ರಾರಂಭಿಸುವುರು, ಪ್ರತಿ ತಾಲೂಕು ಕೇಂದ್ರಗಳಲ್ಲಿ ವೀರಶೈವ ಸಮುದಾಯ ಭವನ ಸ್ಥಾಪಿಸುವುದು, ಸಮಾಜದ ಮುಖವಾಣಿಯಲ್ಲಿ ತ್ರೈಮಾಸಿಕ ಮಾಸ ಪತ್ರಿಕೆಯೊಂದರನ್ನು ಹೊರ ತರುವುದು. ವಧು ವರರ ಮಾಹಿತಿ ಕೇಂದ್ರವನ್ನು ಸ್ಥಾಪಿಸುವುರು, ಸಮಾಜಕ್ಕೆ ಸೂಕ್ತ ರಾಜಕೀಯ ಸ್ಥಾನಮಾನಕ್ಕಾಗಿ ಪಕ್ಷಬೇದ ಮರೆತು ಒಗ್ಗಟ್ಟಿನಿಂದ ಸಮಾಜಕ್ಕೆ ನ್ಯಾಯಕೊಡಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಶ್ರಮಿಸಲಾಗುವುದು ಎಂದರು.

ಸುದ್ದಿಗೊಷ್ಠಿಯಲ್ಲಿ ಶ್ರೀಶೈಲ ಘೂಳಿ, ಕಲ್ಯಾಣಪ್ಪ ಪಾಟೀಲ, ಸುಭಾಷ ವಿಜಾಪೂರೆ, ಎಸ್.ಪಿ.ಮಠಪತಿ, ರಾಜಶೇಖರ ಅಲ್ಲದ, ಚಂದ್ರಶೇಖರ ತಳ್ಳಳ್ಳಿ, ಸಂತೋಷ ಪಾಟೀಲ ಹಾಗೂ ಶರಣು ಪಪ್ಪಾ ಸೇರಿದಂತೆ ಹಲವರಿದ್ದರು..

Leave a Comment