ವೀರಶೈವ ಲಿಂಗಾಯತ ವಧುವರ ಸಮಾವೇಶ 20 ರಂದು

 

ಕಲಬುರಗಿ ಜ 12: ವೀರಶೈವ ಲಿಂಗಾಯತ ,ಜಂಗಮ ಮತ್ತು ವೀರಶೈವ ಲಿಂಗಾಯತರ ಎಲ್ಲ  ಒಳಪಂಗಡಗಳ ವಧು ವರರ  ಸಮಾವೇಶವನ್ನು ನಗರದ  ಸರದಾರ ವಲ್ಲಭಬಾಯಿ ಪಟೇಲ ವೃತ್ತದ ಬಳಿ ಇರುವ ಕನ್ನಡಭವನದಲ್ಲಿ ಜನವರಿ 20 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಆಯೋಜಿಸಲಾಗಿದೆ.

ಧಾರವಾಡದ ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ಮತ್ತು ಹುಬ್ಬಳ್ಳಿಯ ಕರ್ನಾಟಕ ವೀರಶೈವ ವಧು ವರರ ಅನ್ವೇಷಣ ಕೇಂದ್ರದ ಸಂಯುಕ್ತಾಶ್ರಯದಲ್ಲಿ  ಸಮಾವೇಶ ನಡೆಯಲಿದೆ ಎಂದು ವೀರಶೈವ ಸೇವಾ ಸಭಾ ಟ್ರಸ್ಟ ಅಧ್ಯಕ್ಷ ರವಿ ಹಂದಿಗೋಳ ಮತ್ತು ವಧು ವರರ ಅನ್ವೇಷಣ ಕೇಂದ್ರದ ಅಧ್ಯಕ್ಷ ಶಿವಕುಮಾರ ಹಿರೇಮಠ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಧುವರರ ಎರಡು ಫೋಟೋ ಮತ್ತು ಜಾತಕ ಇತರ ವಿವರಗಳೊಂದಿಗೆ ಸಮಾವೇಶದಲ್ಲಿ ಭಾಗವಹಿಸಬೇಕು.  (ಮಾಹಿತಿಗಾಗಿ  ಸಂಪರ್ಕ ಸಂಖ್ಯೆ 9663108606 )

ವಿಧವೆಯರು, ವಿಧುರರು, ಮರುವಿವಾಹ ಆಗಬಯಸುವವರು ,ವಿಕಲಚೇತನರು ಭಾಗವಹಿಸಬಹುದು. ಸಮಾವೇಶದಲ್ಲಿ ಸುಮಾರು 400 ರಿಂದ 500 ಜನ ಭಾಗವಹಿಸುವ ನಿರೀಕ್ಷೆ ಇದೆ.

ಕಳೆದ 25 ವರ್ಷಗಳಿಂದ ರಾಜ್ಯದ ಅನೇಕ ಕಡೆ ವಧುವರರ ಸಮಾವೇಶಗಳನ್ನು ನಡೆಸಿಕೊಂಡು ಬರುತ್ತಿದ್ದು ಇದುವರೆಗೂ ಸುಮಾರು 2500 ಮದುವೆಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ  ಡಾ ಬಾಪುಗೌಡ ಪಾಟೀಲ ಉಪಸ್ಥಿತರಿದ್ದರು..

Leave a Comment