ವಿ.ಎಚ್.ಪಿ. ವಿನ್ಯಾಸದ ಪ್ರಕಾರ ಮಂದಿರ ನಿರ್ಮಾಣಕ್ಕೆ ೫ ವರ್ಷ ಬೇಕು

ಅಯೋಧ್ಯೆ, ನ. ೧೦: ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆಗಳೆಲ್ಲಾ ಇಂದು ದೂರವಾಗಿದ್ದರೂ ಸಹ, ವಿಶ್ವ ಹಿಂದು ಪರಿಷತ್ ಸಿದ್ಧಪಡಿಸಿರುವ ಮಂದಿರ ವಿನ್ಯಾಸದ ಪ್ರಕಾರವೇ ಒಂದುವೇಳೆ ಮಂದಿರ ನಿರ್ಮಾಣಕ್ಕೆ ತೊಡಗಿದರೆ ೨೫೦ ತಜ್ಞ ಕುಶಲಕರ್ಮಿಗಳು ಅವಿಶ್ರಾಂತವಾಗಿ ದುಡಿದರೂ ಸಹ ರಾಮ ಮಂದಿರ ಪೂರ್ಣ ಸಿದ್ಧಗೊಳ್ಳಲು ಇನ್ನೂ ಕನಿಷ್ಟ ೫ ವರ್ಷಕ್ಕೂ ಹೆಚ್ಚು ಕಾಲ ಬೇಕಾಗುತ್ತದೆ ಎಂದು ಮಂದಿರ ನಿರ್ಮಾಣ ಕಾರ್ಯಾಗಾರದ ಮೇಲ್ವಿಚಾರಕರು ಪ್ರತಿಪಾದಿಸಿದ್ದಾರೆ.
ರಾಮಮಂದಿರದ ಪ್ರಮುಖ ಶಿಲ್ಪಕಲಾ ತಜ್ಞ ರಜನೀಕಾಂತ್ ಸೋಂಪುರ ಅವರು ಈ ವರ್ಷದ ಜುಲೈನಲ್ಲಿ ಮೃತಪಟ್ಟ ನಂತರ, ವಿಹಿಂಪ ಕಾರ್ಯಶಾಲೆಯಲ್ಲಿದ್ದ ಕುಶಲಕರ್ಮಿಗಳೆಲ್ಲಾ ಜಾಗ ಖಾಲಿ ಮಾಡಿ, ಅಲ್ಲಿಂದೀಚೆಗೆ ಯಾರೊಬ್ಬರೂ ಅಲ್ಲಿಲ್ಲ. ೧೯೯೦ ರಿಂದೀಚೆಗೆ ವಿಹಿಂಪ ಕಾರ್ಯಶಾಲೆಯಲ್ಲಿ ಪ್ರತಿದಿನ ೮ ಗಂಟೆಗಳ ಕಾಲ ನಿರಂತರ ಕೆಲಸ ನಡೆದರೂ ಈವರೆಗೆ-ಅಂದರೆ ೩ ದಶಕಗಳ ನಂತರ ಇದೀಗ ಕೇವಲ ಮಂದಿರದ ಅರ್ಧ ಕೆಲಸ-ಅಂದರೆ ನೆಲ ಮಹಡಿ ಮಾತ್ರ ಪೂರ್ಣಗೊಂಡಿದೆ!
ಈವರೆಗೆ ಮಂದಿರದ ಒಟ್ಟು ೨೧೨ ಸ್ತಂಭಗಳ ಪೈಕಿ ೧೦೬ ಸ್ತಂಭಗಳು ಮಾತ್ರ ಸಿದ್ಧಗೊಂಡಿವೆ. ಇವುಗಳನ್ನು ಅಯೋಧ್ಯೆಯಲ್ಲಿನ ಕಾರ್ಯಶಾಲೆಯಲ್ಲಿ ಸಾಲಾಗಿ ಜೋಡಿಸಿಡಲಾಗಿದೆ. ‘ಪ್ರಸ್ತುತ ಕಾರ್ಯಶಾಲೆಯಲ್ಲಿ ಯಾವುದೇ ಕುಶಲಕರ್ಮಿಯಾಗಲಿ; ಕೆಲಸಗಾರರಾಗಲಿ ಇಲ್ಲ. ಪುನಃ ಕೆಲಸ ಆರಂಭವಾದರೆ ಮುಂದಿನ ಐದು ವರ್ಷಗಳಿಗಾಗಿ ಕನಿಷ್ಟ ೨೫೦ ಕುಶಲಕರ್ಮಿಗಳ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

Leave a Comment