ವಿ.ಆರ್.ಭಟ್ ಸ್ಮಾರಕ ವಾರ್ಷಿಕ ದತ್ತಿ

ಉಪನ್ಯಾಸಕ್ಕೆ ನಾಳೆ ಚಾಲನೆ
ಮಂಗಳೂರು, ಆ.೨೯- ನಗರದ ಖ್ಯಾತ ವೈದ್ಯ ದಿವಂಗತ ವಿ.ಆರ್.ಭಟ್ ಅವರ ಜನ್ಮಶತಮಾನೋತ್ಸವ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ, ಆಗಸ್ಟ್ ೩೦ರಂದು ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಆರಂಭಿಸಲು ನಿರ್ಧರಿಸಿದೆ.
ಈ ವಾರ್ಷಿಕ ದತ್ತಿ ಕಾರ್ಯಕ್ರಮದಲ್ಲಿ ಕ್ಷಯ ರೋಗ ಹಾಗೂ ಇತರ ಸೋಂಕು ರೋಗಗಳ ಬಗ್ಗೆ ತಜ್ಞರಿಂದ ಉಪನ್ಯಾಸ ಇರುತ್ತದೆ.
ಬೆಂಗಳೂರು ಕೆಎಚ್‌ಪಿಟಿ ಟ್ರಸ್ಟ್‌ನ ಟ್ರಸ್ಟಿ ಡಾ.ರೆನಾಲ್ಡ್ ವಾಷಿಂಗ್ಟನ್ ಅವರು ಮೊದಲ ವರ್ಷದ ದತ್ತಿ ಉಪನ್ಯಾಸ ನೀಡುವರು. ಪ್ರತಿ ವರ್ಷ ಕ್ಷಯ ಅಥವಾ ಇತರ ಸೋಂಕು ರೋಗಗಳ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ತಜ್ಞರನ್ನು ಉಪನ್ಯಾಸಕ್ಕೆ ಆಹ್ವಾನಿಸಲಾಗುವುದು ಎಂದು ಐಎಂಎ ಅಧ್ಯಕ್ಷ ಡಾ.ಕೆ.ಆರ್.ಕಾಮತ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ತಮ್ಮ ಇಡೀ ವೃತ್ತಿಜೀವನವನ್ನು ಕ್ಷಯರೋಗಿಗಳ ಸೇವೆಗಾಗಿ ಮುಡಿಪಾಗಿಟ್ಟ ಹಿರಿಯ ಚೇತನದ ಹೆಸರಿನಲ್ಲಿ ಅವರ ಮಗ ರಾಘವೇಂದ್ರ ವಿ.ಭಟ್ ಅವರು ಇತರ ವೈದ್ಯರ ಸಹಕಾರದೊಂದಿಗೆ ಈ ವಾರ್ಷಿಕ ದತ್ತಿ ಉಪನ್ಯಾಸ ಪ್ರಾಯೋಜಿಸಿದ್ದಾರೆ.

Leave a Comment