ವಿಸ್ಮಯಕಾರಿ ಕೀಟ ಪ್ರದರ್ಶನಕ್ಕೆ ವಿದ್ಯುಕ್ತ ಚಾಲನೆ

ರಾಯಚೂರು.ಫೆ.17- ಸ್ಥಳೀಯ ಕೃಷಿವಿಶ್ವವಿದ್ಯಾಲಯದ ಆಡಳಿತ ಭವನದ ಪ್ರಾಂಗಣದಲ್ಲಿ ಇಂದಿನಿಂದ ಆಯೋಜಿಸಲಾದ ಮೂರು ದಿನಗಳ ವಿಸ್ಮಯಕಾರಿ ಕೀಟ ಪ್ರದರ್ಶನಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಕೃಷಿ ವಿವಿ ಕುಲಪತಿ ಡಾ.ಪಿ.ಎಂ.ಸಾಲಿಮಠ ಅವರು, 30 ಪ್ರಭೇದವುಳ್ಳ ಕೀಟ ಪ್ರದರ್ಶನಕ್ಕೆ ಚಾಲನೆ ನೀಡಿದರು. ಇಂದಿನಿಂದ ಸತತ ಮೂರು ದಿನದ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ವಿಸ್ಮಯಕಾರಿ ಕೀಟ ಪ್ರದರ್ಶನ ನಡೆಯಲಿದೆ. ರೆಕ್ಕೆಗಳನ್ನು ಹೊಂದಿರುವ ಏಕೈಕ ಅಕಶೇರುಕ ಜೀವಿಗಳ ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನಕ್ಕೆ ಸ್ಥಳೀಯ ರೈತರು, ಸೇರಿದಂತೆ ನಾಗರೀಕರು ಹಾಗೂ ಶಾಲಾ ಮಕ್ಕಳ ದಂಡೇ ಹರಿದು ಬಂದಿರುವುದು ವಿಶೇಷವಾಗಿ ಕಂಡು ಬಂದಿತು.

Leave a Comment