ವಿಷ ಸೇವಿಸಿ ವ್ಯಕ್ತಿ ಸಾವು

ಧಾರವಾಡ ಡಿ.11-ನೋವಿನ ಬಾಧೆ ತಾಳತಾರದೆ ಮಾನಸಿಕವಾಗಿ ನೊಂದು ವ್ಯಕ್ತಿಯೋರ್ವಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಾಡ ಗ್ರಾಮದಲ್ಲಿ ನಡೆದಿದೆ.
ಪರಶುರಾಮ ತಂದೆ ಸುರೇಶ ವಾಲ್ಮಿಕಿ  (27 ) ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತ  ಮನೆಯ ಕಟ್ಟೆ ಮೇಲೆ  ಸುಮಾರು 5 ವರ್ಷ ಹಿಂದೆ ವಿದ್ಯುತ್ ಕಂಬದಿಂದ ಬಿದ್ದು ಕಾಲು ಮತ್ತು ನಡಕ್ಕೆ ಗಾಯ ಮಾಡಿಕೊಂಡಿದ್ದ. ಇದರ ನೋವಿನಿಂದ ಅತೀಯಾಗಿ ಮಾನಸಿಕವಾಗಿ ನೊಂದಿದ್ದು ನೋವಿನಿಂದ  ಜೀವನದಲ್ಲಿ ಜಿಗುಪ್ಸೆ ಹೊಂದಿ  ಯಾವೂದೋ ವಿಷ ಕಾರಕ ಎಣ್ಣೀ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈತನನ್ನು ಚಿಕಿತ್ಸೆಗೆಂದು  ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಈತ ಅಸುನೀಗಿದ್ದಾನೆ. ಈ ಕುರಿತು  ಧಾರವಾಡ ಗ್ರಾಮೀಣ ಪೋಲಿಸರು ತಿಳಿಸಿದ್ದಾರೆ.

Leave a Comment