ವಿಶ್ವ ಹಿಂದು ಪರಿಷದ್ ಸ್ಥಾಪನಾ ದಿನಾಚರಣೆ

ದಾವಣಗೆರೆ.ಆ.24; ಕೃಷ್ಣ ಜನ್ಮಾಷ್ಟಮಿ ದಿನದಿಂದೇ ವಿಶ್ವ ಹಿಂದೂ ಪರಿಷತ್ ಪರಿಷದ್ ಹುಟ್ಟಿಕೊಂಡಿದ್ದು ರಾಷ್ಟ್ರದ ಹಿತಾಸಕ್ತಿಗೆ ಎಲ್ಲರೂ ಒಟ್ಟುಗೂಡಿ ಶ್ರಮಿಸಬೇಕು ಎಂದು ಮುಖಂಡ ಕೆ.ಬಿ.ಶಂಕರ್‍ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ದುರ್ಗಾಂಬಿಕಾ ದೇವಸ್ಥಾನದ ಬಳಿಯ ಶಿವಾಜಿ ಸರ್ಕಲ್‍ನಲ್ಲಿ ನಡೆದ ಶೀಕೃಷ್ಣ ಜನ್ಮಾಷ್ಟಮಿ ಮತ್ತು ವಿಶ್ವ ಹಿಂದು ಪರಿಷದ್ ಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಶ್ವದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ದೇಶಗಳಂತೆ ಭಾರತವು ಹಿಂದೂ ರಾಷ್ಟ್ರವಾಗಿದೆ. ಹಿಂದೂ ಸಮಾಜ ಅಸಂಘಟಿತವಾಗಿ ಹಾಗೂ ಅನೇಕ ಜಾತಿ ಮತ ಪಂಥಗಳಲ್ಲಿ ವಿಭಜನೆಗೊಂಡಿದೆ. ಜನಸಾಮಾನ್ಯರಿಗೆ ಧರ್ಮ, ಸಂಸ್ಕೃತಿ ಹಾಗೂ ಪ್ರಾಚೀನ ಇತಿಹಾಸದ ಪರಿಚಯಲ್ಲವೇ ಇಲ್ಲವಾಗಿತ್ತು. ಆದ್ದರಿಂದ ಹಿಂದು ಸಮಾಜದಲ್ಲಿ ಏಕತೆ ಹಾಗೂ ಸ್ವಾಭಿಮಾನ ಮೂಡಿಸುವ ಅಗತ್ಯತೆ ಮನಗಂಡು 1964ರ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನಂದು ವಿಶ್ವ ಹಿಂದು ಪರಿಷದ್ ಹುಟ್ಟಿಕೊಂಡಿತು ಎಂದರು. ಶಿರಡಿ ಸಾಯಿಬಾಬ ದೇವಸ್ಥಾನದ ಗುರುದೇವ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಹಿಂದುಗಳು ತಾನು ಯಾವುದೇ ಜಾತಿಯಾದ ದರೂ ಎಲ್ಲ ಹಬ್ಬಗಳು ಆಚರಿಸುತ್ತಿರುವ ಕಾರಣ ಎಲ್ಲರಲ್ಲಿಯೂ ಹಿಂದು ಎಂಬ ಭಾವನೆ ಮೂಡಬೇಕು. ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ಭಾರತ ಹಿಂದೂ ರಾಷ್ಟ್ರವಾಗಿದ್ದು, ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಕಳಸಪ್ಪಳ ಗೌಡ್ರ ಚನ್ನಬಸಪ್ಪ ಮಾತನಾಡಿ, ವಿಶ್ವ ಹಿಂದೂ ಪರಿಷದ್ ಒಂದು ರಾಷ್ಟ್ರೀಯ ಸಂಘಟನೆಯಾಗಿದ್ದು, ಬಡವರ, ದೀನದಲಿತರ ಗಲ್ಲಿಗಳಲ್ಲಿ ಪ್ರತಿಭಾ ಪುರಸ್ಕಾರ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ  ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ  ದೇವರಮನಿ ಶಿವಕುಮಾರ್., ಸಂತೋಷ್ ಪೈಲ್ವಾನ್, ರೇವಣ್ಣ ಸೇರಿದಂತೆ ಇತರೆ ಹಿಂದೂ ಸಂಘಟನಾ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.

Leave a Comment