ವಿಶ್ವ ಸ್ತನ್ಯ ಪಾನ ಸಪ್ತಾಹ ಆಚರಣೆ

ರಾಯಚೂರು.ಆ.03- ನವೋದಯ ವೈದ್ಯಕೀಯ ಕಾಲೇಜು, ಸಮುದಾಯ ವೈದ್ಯಕೀಯ ವಿಭಾಗ ಸಿಂಗನೋಡಿ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರ ಹಾಗೂ ಚಂದ್ರಬಂಡಾ ಉಪ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ಸಿಂಗನೋಡಿ ಗ್ರಾಮದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಆಚರಿಸಲಾಯಿತು.
ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ಭೀಮಯ್ಯ ಬಡೇಸಾಬ್, ವೈದ್ಯಾಧಿಕಾರಿಗಳ ಡಾ.ವಿರುಪಾಕ್ಷಪ್ಪ, ಎದೆ ಹಾಲಿನ ಮಹತ್ವ ಕುರಿತು ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿದರು. ಆರೋಗ್ಯ ಸಹಾಯಕರಾದ ಸುರೇಶ, ವೈದ್ಯರಾದ ಡಾ.ಎಸ್.ಜಿ.ಹಿರೇಮಠ, ಡಾ.ಸುಜಾತ, ಡಾ.ಅನಂತಕುಮಾರ, ಡಾ.ಲಕ್ಷ್ಮೀ, ಡಾ.ವಂದನಾ, ಡಾ.ಸತ್ಯಾರೆಡ್ಡಿ, ನರಸರೆಡ್ಡಿ, ಚನ್ನಮ್ಮ, ತಾಯಮ್ಮ, ಶೃತಿ, ಆಶಾಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment