ವಿಶ್ವ ಸ್ತನಪಾನ ಸಪ್ತಾಹ ಕಾರ್ಯಕ್ರಮ

ರಾಯಚೂರು.ಆ.12- ನವೋದಯ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಡಾ.ಭೀಮಯ್ಯ ಬಡೇಸಾಬ್ ಅವರ ಮಾರ್ಗದರ್ಶನದಲ್ಲಿ ಜನತಾ ಕಾಲೋನಿ ಸಮುದಾಯ ಭವನದಲ್ಲಿ ವಿಶ್ವ ಸ್ತನಪಾನ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಡಾ.ಆಯಿಷಾ, ಡಾ.ಶ್ವೇತಾ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ನಾತಕೋತ್ತರ ವಿದ್ಯಾರ್ಥಿಯಾದ ಡಾ.ಲಕ್ಷ್ಮಿರವರ ಸ್ತನಪಾನದ ಮಹತ್ವ ಕುರಿತು ಮಾಹಿತಿ ನೀಡಿದರು. ಡಾ.ವಂದನಾ, ಅಂಗನವಾಡಿ ಮೇಲ್ವಿಚಾರಕರಾದ ಗಂಗಮ್ಮ ಅವರು 2 ವರ್ಷದೊಳಗಿನ ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಸುವ ಕುರಿತು ಮಾಹಿತಿ ನೀಡಿದರು.
ನರಸರೆಡ್ಡಿ, ತಿಮಲಮ್ಮ, ಶಾಹೀದಾ ಬೇಗಂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment