ವಿಶ್ವ ಯೋಗ ದಿನಾಚರಣೆ : ನಗರದಲ್ಲಿ ಪೂರ್ವಾಭ್ಯಾಸ

ಮೈಸೂರು. ಜೂ. 16. ಮುಂದಿನ ಕೆಲವೇ ದಿನಗಳಲ್ಲಿ ನೆಡೆಯಲಿರುವ ವಿಶ್ವಯೋಗ ದಿನಾಚರಣೆ ಅಂಗವಾಗಿ ನಗರದ ರೇಸ್ ಕೋರ್ಸ್ ಆವರಣದಲ್ಲಿ ಇಂದು ಬೆಳಿಗ್ಗೆ ಸಾವಿರಾರು ಮಂದಿ ಯೋಗಾಪಟುಗಳು ಪೂರ್ವಾಭ್ಯಾಸ ನಡೆಸಿದರು.
ಈ ಬಾರಿ ಗಿನ್ನೀಸ್ ದಾಖಲೆಯ ಗುರಿಯನ್ನಿಟ್ಟುಕೊಂಡು ಯೋಗಾಭ್ಯಾಸವನ್ನು ಮಾಡಲಾಗುತ್ತಿದೆ. ಕಳೆದ ಬಾರಿ ನಗರದಲ್ಲಿ ನೆಡೆದ ವಿಶ್ವಯೋಗ ದಿನಾಚರಣೆಯಲ್ಲಿ ಸುಮಾರು 85 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇದನ್ನು ಗಮನಿಸಿದಾಗ ಗಿನ್ನೀಸ್ ದಾಖಲೆ ನಿರ್ಮಿಸುವ ಎಲ್ಲ ಲಕ್ಷಣಗಳೂ ಕಂಡು ಬಂದಿದ್ದವು. ಆದರೆ ದುರದೃಷ್ಟವಶಾಕ ಈ ಅವಕಾಶ ಕೈ ತಪ್ಪಿಹೋಯಿತು. ಏನೇ ಆಗಲಿ ಮುಂದಿನ ಬಾರಿಯಾದರೂ ಗಿನ್ನೀಸ್ ದಾಖಲೆ ಮಾಡುವಂತೆ ಅಂದೇ ಪಣತೊಟ್ಟಿರುವ ಯೋಗಾ ಪಟುಗಳು ಕಠಿಣ ತಾಲೀಮ ನೆಡೆಸುತ್ತಿದ್ದಾರೆ. ಈ ಬಾರಿಯ ಯೋಗ ದಿನಾಚರಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯೋಗಾ ಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಇಂದು ಬೆಳಿಗ್ಗೆ 5 ಗಂಟೆಯಿಂದಲೇ ಸುಮಾರು 16 ಸಾವಿರಕ್ಕೂ ಹೆಚ್ಚು ಮಂದಿ ಯೋಗಾ ಪಟುಗಳು ಪೂರ್ಣಭ್ಯಾಸದಲ್ಲಿ ತೊಡಗಿದ್ದರು.
@12bc = ಗಮನ ಸೆಳೆದ ಜಿಟಿಡಿ
ಇದೇ ವೇಳೆ ಜಿ.ಟಿ. ದೇವೇಗೌಡರು ಹೆಚ್ಚು ಗಮನ ಸೆಳೆದರು. ಕಾರಣ ಪ್ಯಾಂಟ್, ಶರ್ಟ್ ನಲ್ಲಿ ಜಿ.ಟಿ ದೇವೇಗೌಡರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಜಿ.ಟಿ. ದೇವೇಗೌಡರು ಬಿಳಿ ಪಂಚೆ, ಬಿಳಿ ಶರ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇಂದು ಅಪರೂಪಕ್ಕೆ ಸಚಿವರು ಕಂದು ಬಣ್ಣದ ಪ್ಯಾಂಟ್, ತಿಳಿ ಬೂದು ಬಣ್ಣದ ಶರ್ಟ್ ತೊಟ್ಟು ಯೋಗ ತಾಲೀಮಿಗೆ ಬಂದಿದ್ದಾರೆ. ಅವರ ಉಡುಪು ಎಲ್ಲರ ಗಮನಸೆಳೆಯಿತು.
ರೇಸ್ ಕೋರ್ಸ್ ನಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಸಾಮೂಹಿಕವಾಗಿ ಯೋಗಪಟುಗಳು ಯೋಗ್ಯಾಭ್ಯಾಸ ಮಾಡಿದ್ದಾರೆ. ಸಚಿವ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಯೋಗ ಪಟುಗಳು ಜೊತೆ ಸೇರಿ ತಾವೂ ಯೋಗಾಭ್ಯಾಸ ಮಾಡಿದ್ದಾರೆ.
@12bc = ರಸ್ತೆ ಸಂಚಾರ ನಿರ್ಭಂಧ :
ನಗರದ ರೇಸ್ ಕೋರ್ಸ್‍ನಲ್ಲಿ ಇಂದು ನೆಡೆಯುತ್ತಿರುವ ಯೋಗ ದಿನಾಚರಣೆ ಪೂರ್ಣಭ್ಯಾಸದ ಅಂಗವಾಗಿ ರೇಸ್ ಕೋರ್ಸ್ ಸುತ್ತಮುತ್ತ ಇರುವ ಎಲ್ಲಾ ರಸ್ತೆಗಳಲ್ಲೂ ವಾಹನ ಸಂಚಾರವನ್ನು ನಿರ್ಭಂಧಿಸಲಾಗಿತ್ತು.
ಈ ಸಂಧರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪಾಲತಾ ಜಗನ್ನಾಥ್, ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

Leave a Comment