ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶಿಸಿದ ಪಿ ವಿ ಸಿಂಧು

ಬಾಸೆಲ್  ಆ 24 – ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶ ಪಡೆದುಕೊಂಡಿದ್ದಾರೆ.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸಿಂಧು 21-7, 21-14 ಗೇಮ್ ಗಳಿಂದ ಚೈನಾದ ಚೆನ್ ಯುಫೆ ವಿರುದ್ಧ ಜಯಗಳಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಮೊದಲ ಗೇಮ್ ಅನ್ನು ಲೀಲಾ ಜಾಲವಾಗಿ ಗೆದ್ದ ಸಿಂಧು .. ಎರಡನೇ ಗೇಮ್‌ನಲ್ಲಿ ಸಾಕಷ್ಟು ಕಠಿಣ ಶ್ರಮ ವಹಿಸಿ ಅಂತಿಮ ಸ್ಥಾನ ತಲುಪಿದರು. 40 ನಿಮಿಷಗಳ ಪಂದ್ಯದಲ್ಲಿ ಸಿಂಧು ಏಕಪಕ್ಷೀಯ ಗೆಲುವು ಸಾಧಿಸಿ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು
ಇದರ ಪರಿಣಾಮ, ಸಿಂಧು ಸತತ ಮೂರನೇ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮಹಿಳಾ ಸಿಂಗಲ್ಸ್‌ನ ಫೈನಲ್‌ಗೆ ಆಹರ್ತೆ ಪಡೆದುಕೊಂಡಂತಾಗಿದೆ. ಭಾನುವಾರ ನಡೆಯಲಿರುವ ಅಂತಿಮ ಪಂಧ್ಯದಲ್ಲಿ ಸಿಂಧು ಅವರು ರಾಚಾನಕ್ ಇಂಥಾನನ್ ಮತ್ತು ಒಕುಹರಾ ಅವರನ್ನು ಎದುರಿಸಲಿದ್ದಾರೆ.

Leave a Comment