ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಫೈನಲ್ ಗೆ ಪಂಗಾಲ್

ನವದೆಹಲಿ. ಸೆ.೨೦. ಏಷ್ಯಾದ ಚಾಂಪಿಯನ್ ಅಮಿತ್ ಪಂಗಾಲ್ (52 ಕೆಜಿ) ಶುಕ್ರವಾರದಂದು ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎರಡನೇ ಶ್ರೇಯಾಂಕಿತ ಪಂಗಾಲ್ ಅವರು 3-2ರಿಂದ ಮೇಲುಗೈ ಫೈನಲ್ ಗೆ ತಲುಪಿದ್ದಾರೆ. ಶನಿವಾರದಂದು ಅವರು ಉಜ್ಬೇಕಿಸ್ತಾನ್‌ನ ಶಖೋಬಿಡಿನ್ ಜೊಯಿರೊವ್ ಅವರನ್ನು ಎದುರಿಸಲಿದ್ದಾರೆ. ಜೊಯಿರೊವ್ ತಮ್ಮ ಸೆಮಿಫೈನಲ್ ಪಂದ್ಯದಲ್ಲಿ ಫ್ರೆಂಚ್ ಆಟಗಾರ ಬಿಲ್ಲಾಲ್ ಬೆನ್ನಾಮಾ ಅವರನ್ನು ಸೋಲಿಸಿದ್ದರು.

Leave a Comment