ವಿಶ್ವ ಪ್ರಸಿದ್ಧ ಕೃಷ್ಣ ಸುಂದರಿ

ಕಪ್ಪು ಎಂದು ಅಲ್ಲಗೆಳೆಯುವ ಮಂದಿಗೆ ಈಕೆ ನಿಜಕ್ಕೂ ಮಾದರಿ ಎನ್ನಬಹದು. ಪ್ಯಾಷನ್ ವೇದಿಕೆಗಳು ಕೇವಲ ಶ್ವೇತ ವರ್ಣದ ಸುಂದರಿಯರಿಗೆ ಮಾತ್ರ ಎಂಬ ಮಾತನ್ನು ಈಕೆ ಸುಳ್ಳಾಗಿಸಿದ್ದಾಳೆ. ಈ ಬಣ್ಣವೇ ಈಕೆಯನ್ನು ವಿಶ್ವ ಪ್ರಸಿದ್ಧಿ ಕಪ್ಪು ಸುಂದರಿ ಎಂಬ ಖ್ಯಾತಿಯನ್ನು ತಂದು ಕೊಟ್ಟಿದೆ.

ನ್ಯಾಡಕ್ ಥಾಟ್ ಮೂಲತಃ ಸುಡಾನ್‌ನವಳು. ಸದ್ಯ ಆಸ್ಟ್ರೇಲಿಯಾದ ಟಾಪ್ ಮಾಡೆಲ್. ಇವಳ ಸೌಂದರ್ಯ ನೋಡಿ ಟ್ವಿಟ್ಟರ್‌ನಲ್ಲಿ ಎಲ್ಲಾರು ಬೆರಗಾಗಿ ಹೋಗಿದ್ದಾರೆ. ನಿಜಕ್ಕೂ ಆಕೆ ಯುವತೀನಾ ಅಥವಾ ಬಾರ್ಬಿ ಡಾಲ್ ಇರಬಹುದಾ ಅನ್ನೋ ಅನುಮಾನ ಎಲ್ಲರನ್ನೂ ಕಾಡಿತ್ತು.

ಅವಳ ಅಂದ ಚಂದ ಬಾರ್ಬಿ ಡಾಲ್ ಅನ್ನೇ ಮೀರಿಸುವಂತಿದೆ. ೨೧ರ ಹರೆಯದ ಈ ಮಾಡೆಲ್ ಡ್ಯೂಕಿ ಅಂತಾನೇ ಫ್ಯಾಷನ್ ಜಗತ್ತಿನಲ್ಲಿ ಫೇಮಸ್ ಆಗಿದ್ದಾಳೆ. ಮೃದುವಾದ ಸ್ಕಿನ್, ಉದ್ದನೆಯ ಸಿಲ್ಕಿ ಹೇರ್, ಮುಖದಲ್ಲೊಂದು ಅದ್ಭುತ ಸ್ಮೈಲ್ ಇವಳ ಚೆಲುವಿನ ಗುಟ್ಟು.

ಆದ್ರೆ ಅವಳ ಯಶಸ್ಸಿನ ಪಯಣ ಮಾತ್ರ ಮುಳ್ಳಿನ ಹಾದಿಯಾಗಿತ್ತು. ಕಪ್ಪಗಿದ್ದಾಳೆ ಅನ್ನೋ ಕಾರಣಕ್ಕೆ ಸಾಕಷ್ಟು ಜನಾಂಗೀಯ ನಿಂದನೆಯನ್ನು ನ್ಯಾಡಕ್ ಎದುರಿಸಿದ್ದಾಳೆ. ಅವಳ ಗುಂಗುರು ಕೂದಲನ್ನು ನೋಡಿ ಎಲ್ಲರೂ ಆಡಿಕೊಳ್ತಾ ಇದ್ದರು. ಅಮೆರಿಕ ಖ್ಯಾತ ರೂಪದರ್ಶಿ ವಿನ್ನಿ ಹಾರ್ಲೋ, ನ್ಯಾಡಕ್‌ಳನ್ನು ಕಾಲಿಫ್ಲವರ್ ಹೆಡ್ ಅಂತಾ ಅಣಕಿಸಿದಳು.

ತಾನು ಅನುಭವಿಸಿದ ಟೀಕೆಗಳು, ನೋವನ್ನೆಲ್ಲ ಕಳೆದ ಡಿಸೆಂಬರ್‌ನಲ್ಲಿ ನ್ಯಾಡಕ್, ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿ ತನ್ನ ಆಳಲನ್ನು ತೊಡಿಕೊಂಡಿದ್ದಳು. ಯಾವುದೇ ಟೀಕೆ, ದುಮಾನಗಳಿಗೆ  ಕುಗ್ಗದೆ ಆತ್ಮವಿಶ್ವಾಸದಿಂದ ಮುನ್ನಡೆದ ಕೃಷ್ಣ ಸುಂದರಿ ಈಗ ಅಂತರಾಷ್ಟ್ರೀಯ ಮಟ್ಟದ ಟಾಪ್ ಮಾಡೆಲ್‌ಗಳಲ್ಲೊಬ್ಬಳು ಎನಿಸಿಕೊಂಡಿದ್ದಾಳೆ. ಈಕೆಯ ತರಾವೇರಿ ವಿನ್ಯಾಸಗಳಿಗೆ ಮನಸೋತ ತೀರ್ಪುಗಾರರ ಈಕೆ ಅದ್ಬುತ ಮಾಡೆಲ್ ಎಂಬ ಬಿರದನ್ನು ನೀಡಿ ಈಕೆಯನ್ನು ಬೆಂಬಲಿಸಿದ್ದಾರೆ.

Leave a Comment