ವಿಶ್ವ ದೃಷ್ಠಿದಾನ ದಿನಾಚರಣೆ

ರಾಯಚೂರು.ಜೂ.13- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯಾ ವಿಶ್ವವಿದ್ಯಾಲಯ ವತಿಯಿಂದ ವಿಶ್ವ ದೃಷ್ಠಿದಾನ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಹಿರಿಯ ನೇತ್ರ ತಜ್ಞರಾದ ಡಾ.ಪ್ರಣತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಪ್ರಾಜೆಕ್ಟ್ ಮೂಲಕ ದೃಷ್ಠಿದಾನದ ಮಹತ್ವ ತಿಳಿಸಿದರು. ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕನ್ನು ಕಲ್ಪಿಸಲು ಸಾಧ್ಯವಾಗುತ್ತದೆಂದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯಾ ವಿಶ್ವವಿದ್ಯಾಲಯ ಮುಖ್ಯಸ್ಥರಾದ ಬಿ.ಕೆ.ಸ್ಮೀತಾ ಅಕ್ಕನವರು, ಬಿ.ಕೆ.ಶಾರದಾ ಅಕ್ಕನವರು, ರಾಜೇಂದ್ರ ಶಿವಾಳೆ, ಸರಸ್ವತಿ, ಬಿ.ಕೆ.ಅಮರೇಗೌಡ ಪಾಟೀಲ್, ಸಿ.ಪಾಟೀಲ್, ದೇವಣ್ಣ ನಾಯಕ, ಸತ್ಯನಾಥ, ರಾಮಚಂದ್ರಪ್ಪ, ಬಿ.ಕೆ.ರೇಣುಕಾ, ಮಂಜುಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment