ವಿಶ್ವ ತಾಯಂದಿರ ದಿನಾಚರಣೆ ರೆಡಿಯೋದಲ್ಲಿ ಅಮ್ಮನ ಕನಸು ಚಲನಚಿತ್ರ ಪ್ರಸಾರ

ಬೆಂಗಳೂರು, ಮೇ ೧೩- ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಬಿಗ್‌ಎಫ್‌ಎಂನಲ್ಲಿ ಅಮ್ಮನ ಕನಸು ಎಂಬ ಚಲನಚಿತ್ರವನ್ನು ಪ್ರಸಾರ ಮಾಡಲಾಗುತ್ತಿದೆ.

ತಾಯಿ ಸ್ಥಾನದ ಅಧಮ್ಯಚೇತನದ ಸ್ಫೂರ್ತಿಯನ್ನು ಪರಿಚಯಿಸುವ ಮಹತ್ತರ ಗುರಿಯನ್ನು ಮುಂದಿಟ್ಟುಕೊಂಡು ಈ ಚಿತ್ರವನ್ನು ಪ್ರಸಾರ ಮಾಡುತ್ತಿದೆ. ಈ ಚಿತ್ರದ ಮೂಲಕ ಮತ್ತೆ ಚಲನಚಿತ್ರದತ್ತ ರೇಡಿಯೊ ಕಾಲಿರಿಸುತ್ತಿದೆ. ತಮ್ಮ ಕೇಳುಗರಿಗೆ ಒಂದು ವಿಶಿಷ್ಠ ಥೀಮ್ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಕಳೆದ ಎರಡು ವರ್ಷದಿಂದ ರೇಡಿಯೊ ಜಾಲವು ತನ್ನ ವಿಷಯಾಧಾರಿತ ರೇಡಿಯೊ ಚಲನಚಿತ್ರಗಳ ಮೂಲಕ ತಾಯಿಯನ್ನು ಕುರಿತಾದ ಹಲವು ಮುಖಗಳನ್ನು ಪರಿಚಯಿಸಿದೆ.

ಜನಪ್ರಿಯ ಹಾಗೂ ಪ್ರಶಸ್ತಿ ವಿಜೇತ ನಿರ್ದೇಶಕಿ ರೂಪಾ ಅಯ್ಯರ್ ಅವರ ಧ್ವನಿಯಲ್ಲಿ ಮೂಡಿಬರಲಿದೆ. ಹೆಣಗಾಡುವ ತಾಯಿಯ ಸ್ಫೂರ್ತಿದಾಯಕ ಪ್ರಯತ್ನಗಳ ಕುರಿತು ಚಿತ್ರದುದ್ದಕ್ಕೂ ಅಯ್ಯರ್‌ಅವರು ಕೇಳುಗರನ್ನು ಭಾವನಾತ್ಮಕವಾಗಿತಮ್ಮ ಮಾತುಗಳನ್ನು ಕಟ್ಟಿಕೊಡುತ್ತಾ ಹೋಗುತ್ತಾರೆ. ಜನಪ್ರಿಯ ಕನ್ನಡ ಚಿತ್ರನಟಿ ಪದ್ಮಜಾರಾವ್ ಈ ಚಿತ್ರದತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಮೇ ೧೪ ರಂದು ಬೆಂಗಳೂರಿನ ಕೇಳುಗರಿಗಾಗಿ ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಪ್ರಸಾರವಾಗಲಿದೆ. ಅದೇ ದಿನ ಸಂಜೆ೭ ಗಂಟೆಗೆ ಮರು ಪ್ರಸಾರವಾಗಲಿದೆ.

ಬಿಗ್‌ಎಫ್‌ಎಂ ಉದ್ದೇಶ ಈ ದಿನದ ಮಹತ್ವವನ್ನು ಸಾರುವುದು, ಸದಾ ನೆನಪಿನಲ್ಲಿ ಇರುವಂತೆ ಮಾಡುವುದು ಆಗಿದೆ. ವಿಶ್ವತಾಯಂದಿರ ದಿನದ ಮಹತ್ವವನ್ನು ಸಾರುವ ಮತ್ತು ತಾಯಿಯನ್ನು ಸದಾ ಎಲ್ಲರ ನೆನಪಿನಲ್ಲಿ ಇರುವಂತೆ ಮಾಡುವುದು ಬಿಗ್ ಎಫ್‌ಎಂ ನ ಈ ವಿಶೇಷ ಕೊಡುಗೆಯ ಉದ್ದೇಶವಾಗಿದೆ. ಅಲ್ಲದೇ ತಾಯಂದಿರ ಬದುಕಿನ ಪಥದ ಸತ್ಯದ ಅರಿವು ಮಾಡಿಕೊಡುವ, ತಾಯಿ ತನ್ನ ಮಕ್ಕಳ ಕನಸುಗಳನ್ನು ಸಾಕಾರಗೊಳಿಸಲು ಹೋರಾಡುವ ವಿಷಯವನ್ನು ಆಧರಿಸಿ ’ಅಮ್ಮನ ಕನಸು’ ಚಿತ್ರ ಪ್ರಸಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಾಮಾಜಿಕ ಕಳಕಳಿಯ ವಿಚಾರಗಳ ಕುರಿತು ಕೂಡ ಜನರನ್ನು ಜಾಗೃತಗೊಳಿಸುವ ಪ್ರಮುಖ ಸಂದೇಶವನ್ನು ಕೇಳುಗರಿಗೆ ೯೨.೭ ಬಿಗ್ ಎಫ್‌ಎಂ ರವಾನಿಸುತ್ತಿದೆ. ಈ ಹಿಂದೆ ಬಿಗ್ ಎಫ್‌ಎಂ ರೇಡಿಯೋ ಮೊದಲ ಬಾರಿಗೆ ಹೆಣ್ಣು ಮಗಳಿಗೆ ಶಿಕ್ಷಣ ಕೊಡಿಸುವ ತಾಯಿಯ ಮಹತ್ವದ ಪಾತ್ರ ವಿವರಿಸುವ ಚಿತ್ರವನ್ನು ಪ್ರಸಾರ ಮಾಡಿತ್ತು

Leave a Comment