ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ

ದಾವಣಗೆರೆ ಜು.11; ಮಿತ ಸಂಸಾರ, ಹಿತ ಸಂಸಾರ… ಹೆಣಿ ್ಣರಲಿ, ಗಂಡಿರಲಿ ಮಗು ಒಂದೇ ಇರಲಿ.. ಯೋಜಿತ ಪರಿವಾರ ಸುಖ ಅಪಾರ.. ಸಂಪೂರ್ಣ ಜವಾಬ್ದಾರಿಯಿಂದ ಕುಟುಂಬದ ವಿಕಾಸ.. ಚಿಕ್ಕ ಕುಟುಂಬ ಸಂಪೂರ್ಣ ಅಭಿವೃದ್ಧಿ.. ಜನಸಂಖ್ಯೆ ನಿಯಂತ್ರಿಸಿ, ದೇಶದ ಅಭಿವೃದ್ಧಿಗೆ ಸಹಕರಿಸಿ. ಹೀಗೆ ಜನಸಂಖ್ಯಾ ನಿಯಂತ್ರಣದ ಕುರಿತು ಹತ್ತು ಹಲವಾರು ಜಾಗೃತಿ ಘೋಷಣೆಗಳನ್ನು ಕೂಗುತ್ತಾ ನಗರದ ನಿಟುವಳ್ಳಿಯ ಮುಖ್ಯ ರಸ್ತೆಗಳಲ್ಲಿ ಸಾಗಿತು ಜನಸಂಖ್ಯಾ ನಿಯಂತ್ರಣ ಕುರಿತ ಜಾಗೃತಿ ಜಾಥಾ. ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ತಾಲ್ಲೂಕು ಪಂಚಾಯತ್, ನಗರ ಆರೋಗ್ಯ ಕೇಂದ್ರ, ನಿಟುವಳ್ಳಿ ಮತ್ತು ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ(ಆರ್‍ಎಂಎಸ್‍ಎ), ನಿಟುವಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಬೆಳಿಗ್ಗೆ ನಿಟುವಳ್ಳಿಯ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಜನಜಾಗೃತಿ ಜಾಥಾವನ್ನು ಜಿ.ಪಂ ಅಧ್ಯಕ್ಷೆ ಮಂಜುಳಾ ಟಿ ವಿ ರಾಜು ಹಾಗೂ ಮೇಯರ್ ಚಾಲನೆ ನೀಡಿದರು. ಜಿ.ಪಂ ಅಧ್ಯಕ್ಷರು ಈ ಸಂದರ್ಭದಲ್ಲಿ ಮಾತನಾಡಿ, ಜನಸಂಖ್ಯಾ ಸ್ಥಿರತೆಯಿಂದ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜನಸಂಖ್ಯಾ ಸ್ಥಿರತೆ ಸಾಧಿಸಲು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದರು. ಡಿಹೆಚ್‍ಒ ಡಾ. ತ್ರಿಪುಲಾಂಬ, ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಾ , ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಂಗಾಧರ್, ಡಿಎಲ್‍ಓ ಡಾ. ಸರೋಜಾ ಬಾಯಿ, ಆರ್‍ಸಿಹೆಚ್‍ಓ ಡಾ. ಶಿವಕುಮಾರ್, ಶಾಲಾ ಮುಖ್ಯೋಪಾಧ್ಯಾಯ ಡಿ ದುರ್ಗಪ್ಪ, ಟಿಹೆಚ್‍ಓ ಡಾ. ಮಂಜುನಾಥ್ ಪಾಟಿಲ್ ನಗರ ಆರೋಗ್ಯ ವೈದ್ಯಾಧಿಕಾರಿ ಡಾ. ವೆಂಕಟೇಶ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಕಾಧಿಕಾರಿ ಉಮಾಪತಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ರಾಚಪ್ಪ ಕುಪ್ಪಸ್ತ, ಕಿರಿಯ ಮತ್ತು ಆರೋಗ್ಯ ಸಹಾಯಕರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯು ಶಾಲಾ ಮಕ್ಕಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

Leave a Comment