ವಿಶ್ವ ಗ್ರಾಹಕರ ದಿನಾಚರಣೆ: ಕಾನೂನಿನ ಅರಿವು ನೆರವು ಕಾರ್ಯಕ್ರಮ

ರಾಯಚೂರು.ಮಾ.೧೫- ಗ್ರಾಹಕರು ವಸ್ತುಗಳನ್ನು ಖರಿದಿಸುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಶ್ರೇಣಿ ನ್ಯಾಯಧೀಶ ಎಂ.ಸಿ. ನಾಡಗೌಡ ಹೇಳಿದರು.
ನಗರದ ಜಿ.ಪಂ.ಕಾರ್ಯಲಯದ ಜಲನಿರ್ಮಲ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಆಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಮತ್ತು ಜಿಲ್ಲಾ ವಕೀಲರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರು.

ವ್ಯಾಪರಸ್ಥರು ಗ್ರಾಹಕರಿಗೆ ಮಾಡುವ ಮೋಸವನ್ನು ತೆಡಗಟ್ಟಿ ಗ್ರಾಹಕರ ಹಕ್ಕುಗಳ ರಕ್ಷಣೆ ಮಾಡುವ ಉದ್ದೇಶದಿಂದ ಗ್ರಾಹಕರ ಹಕ್ಕುಗಳ ರಕ್ಷಣೆ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಇದನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಗ್ರಾಹಕರಿಗೆ ಸಲಹೆ ನೀಡಿದರು. ಇಂದಿನ ದಿನಮಾನಗಳಲ್ಲಿ ಹಲವಾರು ಕಂಪನಿಇಇಗಳು ಗ್ರಾಹಕರಿಗೆ ವಸ್ತುಗಳನ್ನು ಪೂರೈಸುವಲ್ಲಿ ಕಳಪೆ ಮಟ್ಟದ ವಸ್ತುಗಳನ್ನು ತಯಾರಿಸುತ್ತಿವೆ ಆದ್ದರಿಂದ ಗ್ರಾಹಕರು ವಸ್ತುಗಲನ್ನು ಖರಿದಿಸುವ ಸಮಯದಲ್ಲಿ ಜಾಗೃತಿಯನ್ನು ವಹಿಸಿ ವಸ್ತುಗಳ ಗುಣಮಟ್ಟವನ್ನು ಪರಿಕ್ಷಿಸಬೇಕು ಅದರಲ್ಲಿ ಲೋಪದೋಷಗಳು ಕಂಡು ಬಂದರೆ ನೇರವಾಗಿ ಗ್ರಾಹಕರ ಹಕ್ಕುಗಳ ನ್ಯಾಯಲದಲ್ಲಿ ಅರ್ಜಿ ಸಲ್ಲಸಿದರೆ ಅಂಥವರ ವಿರುದ್ದ ಕಾನೂನಿನ ಮೂಲಕ ಸೂಕ್ತ ಕ್ರಮ ಕೈಗೊಂಡು ಗ್ರಾಹಕರಿಗೆ ನ್ಯಾಯವನ್ನು ಒದಗಿಸುತ್ತದೆ.ಆದ್ದರಿಂದ ಪ್ರತಿಯೊಬ್ಬರು ಕಾನೂನಿ ಅರಿವನ್ನು ತಿಳಿದುಕೊಂಡಿರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಅಶೋಕ ಮಲಘಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಕೆಯ ಉಪನಿರ್ದೇಶಕ ಅರುಣಕುಮಾರ ಸಂಗಾವಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಭಾನುರಾಜ್, ಹಾಗೂ ಸಂಘದ ಸದಸ್ಯರುಗಳು ಮತ್ತು ಗ್ರಾಹಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment