ವಿಶ್ವ ಆಸ್ಟಿರಾಯಿಡ್ಸ್ ದಿನ.

ಜೂನ್ 30, ವಿಶ್ವ ಆಸ್ಟಿರಾಯಿಡ್ಸ್ ದಿನ. 1908 ರಲ್ಲಿ ಇದೇ ಜೂನ್ 30 ರಂದು ರಷ್ಯಾದ ತುಂಗುಸ್ಕಾ ಅರಣ್ಯ ಪ್ರದೇಶದಲ್ಲಿ ಉಲ್ಕೆಯೊಂದು ಅಪ್ಪಳಿಸಿ ಇಡೀ ಅರಣ್ಯ ಪ್ರದೇಶವನ್ನು ಸರ್ವನಾಶ ಮಾಡಿತ್ತು.

ಆಸ್ಟಿರಾಯಿಡ್ಸ್‌ನಿಂದ ಇಂತಹ ಆಘಾತಗಳು ಭೂಮಿಯ ಮೇಲಿನ ಮಾನವ ಸಂಕುಲವನ್ನೇ ನಿರ್ನಾಮ ಮಾಡುವ ಸಾಧ್ಯತೆಯನ್ನು ಹೊಂದಿದ್ದು, ಇದನ್ನು ಎದುರಿಸುವ ನಿಟ್ಟಿನಲ್ಲಿ ಆಸ್ಟಿರಾಯಿಡ್ಸ್ ಕುರಿತಂತೆ ಜಾಗ್ರತೆ ಮೂಡಿಸುವುದೇ ವಿಶ್ವ ಆಸ್ಟಿರಾಯಿಡ್ಸ್ ದಿನದ ಮುಖ್ಯ ಉದ್ದೇಶ. ವಿಶ್ವದಾದ್ಯಂತ ಈ ದಿನಾಚರಣೆಯನ್ನು ಆಚರಿಸಲಾಗಿದೆ.

ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯವೂ ಆಸ್ಟಿರಾಯಿಡ್ಸ್ ಕುರಿತಂತೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಸೌರಮಂಡಲದಲ್ಲಿಯ ಕ್ಷುದ್ರ ಗ್ರಹಗಳೇ ಆಸ್ಟಿರಾಯಿಡ್ಸ್.  ಇವು ಸಾವಿರ ಸಾವಿರ ಸಂಖ್ಯೆಯಲ್ಲಿದ್ದು, ಸೂರ್ಯನ ಸುತ್ತ ಸುತ್ತುತ್ತಿರುತ್ತವೆ. ಗುರು ಹಾಗೂ ಮಂಗಳ ಗ್ರಹಗಳ ನಡುವೆ ಈ ಕ್ಷುದ್ರಗ್ರಹಗಳ ಬೃಹದಾಕಾರದ ಪಟ್ಟಿಯೇ ಇದೆ.

ಇದನ್ನು ಆಸ್ಟಿರಾಯಿಡ್ಸ್ ಬೆಲ್ಟ್ ಎಂದು ಕರೆಯಲಾಗಿದೆ. ಬರೀ ಆ ಪಟ್ಟಿಗೆ ಮಾತ್ರ ಇವು ಸೀಮಿತವಾಗಿಲ್ಲ. ಪಟ್ಟಿಯ ಹೊರಗೂ ಸೌರಮಂಡಲದಾದ್ಯಂತ ವ್ಯಾಪಿಸಿವೆ.

ಆಸ್ಟಿರಾಯಿಡ್ಸ್ ಮತ್ತು ಮೀಟಿಯಾರ್ಸ್ ಎರಡೂ ಒಂದೆ. ಗಾತ್ರ ಮತ್ತು ಅವುಗಳ ವಿನಾಶದ ಸಾಮಾರ್ಥ್ಯದ ಆಧಾರದಲ್ಲಿ ಇವನ್ನು ಬೇರೆ ಬೇರೆಯಾಗಿ ಕರೆಯಲಾಗುತ್ತದೆ.

ಮೀಟಿಯಾರ್ಸ್ ಭೂಮಿಗೆ ಅಪ್ಪಳಿಸುವ ಮೊದಲೇ ಭೂ ವಾತಾವರಣದಲ್ಲಿ ಸುಟ್ಟು ಹೋಗುತ್ತವೆ.

ಹೀಗಾಗಿ ಭೂಮಿಗೆ ಹೆಚ್ಚಿನ ಅಪಾಯವಿಲ್ಲ. ಆದರೆ ಆಸ್ಟಿರಾಯಿಡ್ಸ್ ಅಪ್ಪಳಿಸಿದರೆ ಇಡೀ ಪರಿಸರವನ್ನೇ ಹಾಳುಮಾಡಿಬಿಡುತ್ತವೆ.

ಬಹು ಹಿಂದೆ ಮೆಕ್ಸಿಕೋದ ಯುಕ್ಸಾಟಿನ್ ಪರಿಯಾಯ . ದ್ವೀಪದಲ್ಲಿ ಇದು ಅಪ್ಪಳಿಸಿ ಇಡೀ ಪರಿಸರವನ್ನೇ ಸರ್ವನಾಶ ಮಾಡಿತ್ತು. ಆ ಭಾಗದಲ್ಲಿ ನೆಲೆಸಿದ ಡಯೋಸ್‌ರ್ಸ್ ನಿರ್ನಾಮ ವಾಗಿದ್ದವು.

ಮೊದಲಿಗೆ

ಮೊಟ್ಟ ಮೊದಲಿಗೆ ಆಸ್ಟಿರಾಯಿಡ್ ಅನ್ನು ಪತ್ತೆ ಮಾಡಿದ ಖಗೋಳ ವಿಜ್ಞಾನಿ ಇಟಲಿಯ ಗಿಯು ಸೆಪ್ಪೆ ಪಿಯಾಜ್ಜು 1801 ರ ಹೊಸ ವರ್ಷದ ದಿನದಂದು ನಕ್ಷತ್ರವನ್ನು ಹುಡುಕಾಡುವಾಗ ಆಸ್ಟಿರಾಯಿಡ್ ಒಂದು ಈತನ ಕಣ್ಣಿಗೆ ಬಿತ್ತು. ಇದಕ್ಕೆ ಸೆರಸ್ ಎಂದು ಹೆಸರಿಡಲಾಯಿತು. ನಂತರದ ಶೋಧನೆಯಲ್ಲಿ ಹೊಸ ಹೊಸ ಆಸ್ಟಿರಾಯಿಡ್ಸ್ ಅನ್ನು ಪತ್ತೆ ಮಾಡಿ ಅವುಗಳಿಗೆ ಹೆಸರುಗಳನ್ನು ಇಡಲಾಯಿತ್ತು.

ಕಲ್ಲು ಮತ್ತು ಲೊಹದ ಚೂರುಗಳ ಒಗ್ಗೂಡುವಿಕೆಯಿಂದ ರಚಿತವಾಗುವ ಈ ಆಸ್ಟಿರಾಯಿಡ್ಸ್ ಗ್ರಹದಷ್ಟು ದೊಡ್ಡದಾಗಲು ಇದಕ್ಕೆ ಸಾಧ್ಯವಾಗದೆ ಬಿಡಿ ಬಿಡಿ. ಹಾಗೆ ಉಳಿದುಕೊಂಡಿದೆ. ಆಸ್ಟಿರಾಯಿಡ್ಸ್ ಬೆಲ್ಟ ದಲ್ಲಿರುವ ಸಾವಿರ ಸಾವಿರ

ಆಸ್ಟಿರಾಯಿಡ್ಸ್ ಮೇಲೆ ಗುರು ಗ್ರಹದ ಪ್ರಬಲ ಗುರುತ್ವಾಕರ್ಷಣೆ ಇದ್ದು, ಚೂರುಪಾರು ಒಟ್ಟಾಗಿ ಗ್ರಹದ ರೂಪ ಪಡೆಯಲು ಇದು ಅಡ್ಡಿಯಾಗಿದೆ.

ಭೂ ಕಕ್ಷೆಯಲ್ಲಿ

ಸೂರ್ಯನ ಸುತ್ತ ಸುತ್ತುವ ಇವು ಒಮ್ಮೊಮ್ಮೆ ಭೂ ಕಕ್ಷೆಯಲ್ಲೂ ಹಾದು ಹೋಗುತ್ತವೆ.

1989 ರಲ್ಲಿ 4581 ಆಸ್ಲೆ ಪಿಯುಸ್ ಹೆಸರಿನ ಆಸ್ಟಿರಾಯಿಡ್ ಭೂ ಕಕ್ಷೆಯಲ್ಲಿ ಹಾದುಹೋಗಿತ್ತು. ಇದು ಹಾದು ಹೋದ ಜಾಗದಲ್ಲೇ ಒಂದು ಗಂಟೆ ಹಿಂದೆ ಭೂಮಿ ಸಂಚರಿಸಿತ್ತು. ಒಂದು ಗಂಟೆ ಅವಧಿ ಹೆಚ್ಚು ಕಮ್ಮಿಯಾಗಿದ್ದರೆ ಭೂಮಿಗೆ ಅಪ್ಪಳಿಸುತ್ತಿತ್ತು.

ಇದಾದ ನಂತರದಲ್ಲಿ  ಆಸ್ಟಿರಾಯಿಡ್ಸ್ ಭೂಮಿಗೆ ಅಪ್ಪಳಿಸುತ್ತವೆ. ಇಂತಿಂತ ವರ್ಷ, ದಿನಾಂಕಗಳಂದು ಎಂದು ನಾಸಾ ಹೇಳುತ್ತ ಬಂತು. ಫೆ. 1, 2019 ರಲ್ಲಿ 2002 ಎನ್.ಟಿ. 7 ಹೆಸರಿನ ಆಸ್ಟಿರಾಯಿಡ್ಸ್ ಭೂಮಿಗೆ ಅಪ್ಪಳಿಸುತ್ತದೆ ಎಂದು ಹೇಳಿತ್ತು.

ಆದರೆ ನಾಸಾದ ಮರು ಲೆಕ್ಕಾಚಾರ ಭೂಮಿಗೆ ಇದರ ಅಪಾಯ ಇಲ್ಲ ಎಂಬುದಾಗಿತ್ತು.

99942 ಅಪೋಷಿಸ್ ಹೆಸರಿನ ಆಸ್ಟಿರಾಯಿಡ್ 2029 ರಲ್ಲಿ ಭೂಮಿಗೆ ಅಪ್ಪಳಿಸುತ್ತದೆ ಎಂದು ಹೇಳಿದ್ದ ನಾಸಾ ಈಗ ಆ ಅವಧಿಯನ್ನು 2036ಕ್ಕೆ ಮುಂದೂಡಿದೆ.

– ಉತ್ತನೂರು ವೆಂಕಟೇಶ್.

 

Leave a Comment