ವಿಶ್ವವನ್ನು ನಡುಗಿಸಿದ ನರಮೇಧಕ್ಕೆ ೧೭ ವರ್ಷ

ನ್ಯೂಯಾರ್ಕ್, ಸೆ. ೧೧: ದಶಕಗಳ ಹಿಂದೆ ವಿಶ್ವವನ್ನೇ ನಡುಗಿಸಿದ್ದ ಒಸಾಮಾಬಿನ್ ಲಾಡನ್ ನೇತೃತ್ವದ ತಾಲಿಬಾನ್ ಉಗ್ರ ಸಂಘಟನೆಯವರು ಅಮೆರಿಕದ ನ್ಯೂಯಾರ್ಕ್‌ನಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಜೋಡಿ ಕಟ್ಟಡಕ್ಕೆ ವಿಮಾನ ಉಡಾಯಿಸಿ ಸಾವಿರಾರು ಜನರ ಸಾವು ನೋವಿಗೆ ಕಾರಣವಾದ ವಿಧ್ವಂಸಕ ಕೃತ್ಯಕ್ಕೆ ಇಂದಿಗೆ (ಸೆ. ೧೧) ೧೭ ವರ್ಷ ತಂಬಿದೆ!
ಅಂದಿನಿಂದ ‘೯/೧೧’ ಎಂದೇ ಕುಖ್ಯಾತವಾದ ಈ ಘೋರ ಘಟನೆಯಲ್ಲಿ ಒಟ್ಟು ೨,೭೫೩ ಮಂದಿ ಮೃತಪಟ್ಟರು. ಆದರೆ ಆ ಪೈಕಿ ೧,೧೧೧ ಜನರ ಗುರುತು ಇಂದಿಗೂ ಸಹ ಪತ್ತೆಯೇ ಆಗಿಲ್ಲ! ಗುರುತು ಪತ್ತೆ ಪ್ರಕ್ರಿಯೆ ಇನ್ನೂ ಸಾಗುತ್ತಲೇ ಇದೆ ಎಂದರೆ ಆ ದಾಳಿ ಎಷ್ಟು ರಣ ಭೀಕರವಾಗಿತ್ತು ಎಂಬ ಕಲ್ಪನೆ ಬರಲು ಸಾಧ್ಯ!!
೨೦೦೧ ಸೆ. ೧೧ ರಂದು ತಾಲಿಬಾನ್ ಆತ್ಮಾಹುತಿ ದಳದ ಉಗ್ರರು ತಾವು ಅಪಹರಿಸಿದ ವಿಮಾನವೊಂದನ್ನು ಅಂದು ಸಂಜೆ ಆಕಾಶದಲ್ಲಿ ಹಾರಿಸುತ್ತಾ ತಂದು ಅದೇ ವೇಗದಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಜೋಡಿ ಕಟ್ಟಡಕ್ಕೆ ಸೀದಾ ಅಪ್ಪಳಿಸಿ ಉಢಾಯಿಸಿದಾಗ ಹೊತ್ತಿಕೊಂಡ ಆ ಬೆಂಕಿಯ ಉಂಡೆಗಳು, ದಟ್ಟ ಹೊಗೆಯ ಕಾರ್ಮೋಡದ ಚಿತ್ರ ಕಣ್ಣಮುಂದೆ ಹಾದುಹೋಗುತ್ತದೆ. ಕ್ಷಣಾರ್ಧದಲ್ಲಿ ಕಟ್ಟಡದ ಅರ್ಧಭಾಗವೇ ಕುಸಿಯುತ್ತಿದ್ದಾಗ ಒಳಗಿದ್ದ ಜನರ ಚೀರಾಟ, ಆಕ್ರಂದನ, ಜೀವ ಉಳಿಸಿಕೊಳ್ಳಲು ಮಾಡಿದ ಹೆಣಗಾಟದ ಚಿತ್ರಣ ಭೀಭತ್ಸ್ಯವಾಗಿತ್ತು. ಬಹು ಅಂತಸ್ತಿನ ಆ ಕಟ್ಟಡದೊಳಗೆ ಇದ್ದ ಎಷ್ಟೋ ಮಂದಿ ಜೀವ ಉಳಿಸಿಕೊಳ್ಳುವ ಭರದಲ್ಲಿ ಎತ್ತರದ ಕಿಟಕಿ ಬಾಗಿಲುಗಳಿಂದಲೇ ಕೆಳಗೆ ಹಾರಿ ಜೀವ ತೆತ್ತ ನಿದರ್ಶನಗಳಿವೆ. ಬೆಂಕಿ ಹೊತ್ತಿ ಉರಿದ ಬಳಿಕ ನಿಧಾನವಾಗಿ ಜೋಡಿ ಕಟ್ಟಡ ಕುಸಿದು ಧ್ವಂಸವಾಗಿತ್ತು. ಘಟನಾ ಸ್ಥಳದಲ್ಲಿ ಬಿದ್ದು ರಾಶಿಯಾದ ಸಕಲ ಅವಶೇಷಗಳ ಅಡಿ ಆಗ ೨೨,೦೦೦ ಮಾನವ ದೇಹದ ತುಣುಕುಗಳು ಪತ್ತೆಯಾಗಿದ್ದವು ಎಂದು ವರದಿಯೊಂದು ಹೇಳಿದೆ!
ನಂತರ ಆಕ್ರೋಶ ಭರಿತ ಅಮೆರಿಕಾ, ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರ ಘೋಷಿಸಿ, ಸತತ ಪ್ರಯತ್ನಗಳ ನಂತರ ಪ್ರತೀಕಾರ ಕ್ರಮವಾಗಿ ೬ ವರ್ಷಗಳ ನಂತರ ೨೦೦೭ರಲ್ಲಿ ಕೊನೆಗೂ ಒಸಮಾ ಬಿನ್ ಲಾಡೆನ್‌ನನ್ನು ಪಾಕಿಸ್ತಾನದ ಗಡಿ ಭಾಗದಲ್ಲಿ ಹೊಡೆದುರುಳಿಸಿದ್ದನ್ನೂ ಮರೆಯುವಂತಿಲ್ಲ.
ನ್ಯೂಯಾರ್ಕಿನ ಪ್ರಯೋಗಾಲಯದಲ್ಲಿ ಅವಶೇಷಗಳನ್ನು ಆಧರಿಸಿ ಈಗಲೂ ಸಹ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮೃತರು ಹಾಗೂ ವಸ್ತುಗಳ ಗುರುತು ಪತ್ತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರೆ ನಂಬಲೇಬೇಕು; ಆದರೆ ೧೭ ವರ್ಷ ದಾಟಿದ ನಂತರವೂ ಇದರ ಯಶಸ್ಸು ಎಷ್ಟರಮಟ್ಟಿಗೆ ಖಚಿತ ಎಂಬುದೇ ಅನುಮಾನ!

Leave a Comment