ವಿಶ್ವವನ್ನು ಉನ್ನತಮಟ್ಟಕ್ಕೆ ಬೆಳೆಸಿದ ಕೀರ್ತಿ ಪೈಗಂಬರ್ ಗೆ

ಪಿರಿಯಾಪಟ್ಟಣ : ಡಿ.2- ವಿಶ್ವಜ್ಞಾನಿ ಮಹಮದ್ ಪೈಗಂಬರ್ ರವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ವಿಶ್ವಕ್ಕೆ ಮಾದರಿಯಾಗಿರುವ ಮುಸಲ್ಮಾನರ ಗುರುಗಳಾದ ಪ್ರವಾದಿ ಮಹಮದ್ ಪೈಗಂಬರ್ ರವರ ದಿನಾಚರಣೆಯು ಇತರರ ದಿನಾಚರಣೆಗಳಂತೆ ಆಚರಣೆ ಮಾಡುವುದು ಮುಸಲ್ಮಾನರ ಆದ್ಯ ಕರ್ತವ್ಯವಾಗಿದೆ ಎಂದು ಹಾಸನದ ಮುಸ್ಲಿಂ ಗುರುಗಳಾದ ನಾಸಿರ್ ಹುಸೇನ್ ತಿಳಿಸಿದರು.
ಪಟ್ಟಣದ ಟ್ಯಾಂಕ್ ಬಡಾವಣೆಯಲ್ಲಿ ಆಯೋಜಿಸಿದ ಜಶ್ನೆ ಈದ್ ಮಿಲಾದುನ್ ನಬಿ  ಅಂಜುಮನ್ ಮೊಹಲ್ಲಾ ಕಮಿಟಿ ವತಿಯಿಂದ ಮಹಮದ್ ಪೈಗಂಬರ್ ರವರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ದೇಶದಲ್ಲಿ ಅನೇಕ ಗಣ್ಯರು ಅವರದೇ ಆದ ಕೊಡುಗೆ ನೀಡಿದ್ದಾರೆ. ಅಂತೆಯೇ ವಾಲ್ಮೀಕಿ, ಗಾಂಧಿ, ಅಂಬೇಡ್ಕರ್, ಸುಭಾಶ್ ಚಂದ್ರಬೋಸ್, ಹೀಗೆ ಅನೇಕ ಗಣ್ಯರ ಜಯಂತಿಗಳನ್ನು ಆಚರಣೆ ಮಾಡುವ ಮುಖಾಂತರ ದೇಶದ ಅತ್ಯುನ್ನತ ಮಾದರಿಯನ್ನು ಅನುಸರಿಸುತ್ತಾ ಬಂದಿದ್ದು ಅಂತೆಯೇ ಮುಸ್ಲಿಂ ಜನಾಂಗವು ಪ್ರವಾದಿ ಮಹಮದ್ ಪೈಗಂಬರ್ ರವರ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಬೇಕಾಗಿದೆ. ಕಾರಣ 6ನೇ ಶತಮಾನದ ಹಿಂದೆ ವಿಶ್ವದೆಲ್ಲೆಡೆ ಪರಿವರ್ತನೆಗಳು ಬದಲಾವಣೆಗಳು ವಿಶ್ವದಲ್ಲಿ ಯಾವುದೇ ಬದಲಾವಣೆ ಕಂಡಿದ್ದರೆ ಅದು ಮಹಮದ್ ಪೈಗಂಬರ್ ರವರಾಗಿರುತ್ತಾರೆ. ಪ್ರವಾದಿ ಮಹಮದ್ ಪೈಗಂಬರ್ ರವರು ಅಜ್ಞಾನದ ಅಂಧಕಾರ ಮಾನವ ಮೌಲ್ಯಗಳು ಕತ್ತಲಿಂದ ಬೆಳಕಿನೆಡೆಗೆ ಪರಿವರ್ತನೆ ಕ್ರಾಂತಿ ಗೀತೆಯನ್ನು ಹಾಡಿದ ಅಜ್ಞಾನವನ್ನು ಅಳಿಸಿ ವಿಜ್ಞಾನವನ್ನು ಬೆಳಗಿಸಿ ವಿಶ್ವವನ್ನು ಉನ್ನತಮಟ್ಟಕ್ಕೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರ ಜಯಂತಿಯನ್ನು ಆಚರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅವರು 6ನೇ ಶತಮಾನದಲ್ಲಿ ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವ ಮಹಾಸಮ್ಮೇಳನದಲ್ಲಿ ಬಿಳಿಯರು ಹಾಗೂ ಕರಿಯರ ನಡುವೆ ಹೋರಾಟ ಮಾಡುತ್ತಿದ್ದವರ ವಿರುದ್ದ ದಂಗೆ ಎದ್ದು ವರ್ಣಬೇಧ ನೀತಿಯನ್ನು ಕಿತ್ತುಹಾಕಲು ಅನೇಕ ಹೋರಾಟ ಮಾಡಿದ್ದಾರೆ.  ಅಮೇರಿಕಾದ ಒಂದು ಖಾಸಗಿ ಕಂಪನೆಯು ಒಂದು ಪುಸ್ತಕ ಹೊರತರುತ್ತಾರೆ. ಆಪುಸ್ತಕದಲ್ಲಿ  20 ಸಾವಿರ ಕೋಟಿ ಜನಗಳಿರುವ ಪುಸ್ತಕವನ್ನು ಅದ್ಯಯನ ಮಾಡುತ್ತಾರೆ. ಅದರಲ್ಲಿ ವಿವಿಧ ಸಾಧನೆ ಮಾಡಿರುವಂತಹ ವ್ಯಕ್ತಗಳನ್ನು ಗುರುತಿಸಿ 20 ಸಾವಿರ ಹೆಸರನ್ನು ನೊಂದಾಯಿಸಿರುತ್ತಾರೆ. ಅವರೆಲ್ಲಾರಿಗಿಂತನೂ ಅತ್ಯಧಿಕ ಜಾಗತಿಕ ಮಟ್ಟದಲ್ಲಿ ಮೊದಲನೆಯದಾಗಿ ಪ್ರವಾದಿ ಮಹಮದ್ ಪೈಗಂಬರ್ ರವರನ್ನು ಆರಿಸಿ ಅತ್ಯುತ್ತಮ ವಿಶ್ವಜ್ಞಾನಿ ಎಂದು ಕರೆಯಲ್ಪಡುತ್ತಾರೆ. ಅದರಿಂದಲೇ ಅದರಿಂದಲೇ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷನೂ ಸಹ ಆಚರಣೆ ಮಾಡಬೇಕೆಂದು ಕರೆ ಕೊಟ್ಟರು.
ಸಿದ್ದಾಪುರದ ಮುಸ್ಲಿಂ ಗುರುಗಳಾದ ನೂರ್‍ದಿನ್‍ಜಿಹಾರಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಜನಾಂಗವನ್ನು ಕಂಡರೆ ದೇಶದೆಲ್ಲೆಡೆ ತಪ್ಪು ತಿಳುವಳಿಕೆಯಿಂದ ನೋಡುತ್ತಾರೆ. ಕಾರಣ ಮುಸ್ಲಿಂ ಜನಾಂಗವು ಅನೈತಿಕ ಚಟುವಟಿಕೆಗಳು ಗಲಾಟೆ, ಕೋಮು ಗಲಬೆಗೆ ಕುಮ್ಮಕ್ಕು ನೀಡುತ್ತಾರೆ ಹಾಗೆ ಜನರನ್ನು ಕೊಲ್ಲುತ್ತಾರೆ ಎಂಬ ಕೆಟ್ಟ ಸಂದೇಶವನ್ನು ಬಿಂಬಿಸಲಾಗುತ್ತದೆ. ಆದರೆ ಇಸ್ಲಾಂ ಧರ್ಮದಲ್ಲಿ ಈ ರೀತಿ ಮಾಡುವುದಿಲ್ಲ ಈ ಧರ್ಮವು ಕರುಣೆ ಸಹನೆ ಪ್ರೀತಿ ಸಂಕೇತ ಒಬ್ಬರೊನ್ನೊಬ್ಬರು ಸ್ನೇಹದಿಂದ ಬಾಳಬೇಕೆಂಬ ಆಸೆ ಮುಖ್ಯವಾಗಿರುತ್ತದೆ ಹೊರತು ಬೇರೇನೂ ಇಲ್ಲ. ಈ ಬಯೋತ್ಪಾದನೆ ಉಂಟಾಗಲು ಕಾರಣ ಲೀಫಿಯಾ, ಇರಾಕ್,  ಇರಾನ್, ಇಂತಾ ರಾಷ್ಟ್ರಗಳಲ್ಲಿರುವಂತಹ ಯಹೂದಿಗಳು ಈ ಕೆಲಸಗಳನ್ನು ಮಾಡುತ್ತಾರೆ. ಹಾಗೂ ಮುಸ್ಲಿಂ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಮುಸ್ಲಿಂಮರನ್ನು ಹತ್ತಿಕ್ಕುವ ಕೆಲಸ ಮಾಡುತ್ತಾರೆ. ವಿಶ್ವದಲ್ಲಿ ಹಯೂದಿಗಳಿರುವ ರಾಷ್ಟ್ರಗಳೆಂದರೆ ಇಸ್ರೈಲ್ ರಾಷ್ಟ್ರ. ಈ ರಾಷ್ಟ್ರದಲ್ಲಿ ಮುಸ್ಲಿಂಮರನ್ನು ಮುಂದಿಟ್ಟುಕೊಂಡು ಗಲಾಟೆ ಇನ್ನಿತರ ಕೃತ್ಯಗಳನ್ನು ಎಸಗುತ್ತಾರೆ.
ಈ ರೀತಿ ಇಲ್ಲಾಂ ಧರ್ಮದಲ್ಲಿ ಈ ರೀತಿಯ ಕೃತ್ಯಗಳನ್ನು ಎಸಗಿದರೆ ಕೋಮುಗಲುಬೆಗಳಿಗೆ ಪ್ರಚೋದನೆ ನೀಡಿದಲ್ಲಿ ಅವನು ಇಲ್ಲಾಂ ಧರ್ಮದವನಾಗಿರಲು ಸಾಧ್ಯವಿಲ್ಲ ಎಂದು ಕುರಾನ್ ಹೇಳುತ್ತದೆ. ಯಾರಾದರೂ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಕೊಲ್ಲುವುದಾದರೆ ಪ್ರಪಂಚದಲ್ಲಿ ಸರ್ವ ಮಾನವರನ್ನು ಕೆಟ್ಟ ಕೊಲೆಗಡುಕನಾಗಿರುತ್ತಾನೆ. ಎಂದು ಕುರಾನ್ ಹೇಳುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯತಿ ಸದಸ್ಯ ಐಲಾಪುರ ರಾಮು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಬೇರೆ ಧರ್ಮದವರು ಭಾಗವಹಿಸುತ್ತಾರೆ. ಇದನ್ನೇ ಆತ್ಮೀಯತೆ ಮತ್ತು ಭಾತೃತ್ವದ ಒಂದು ಸಂಕೇತವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಆದರೆ ಸತ್ಯಾ ಸತ್ಯತೆಯ ಮಹತ್ವ ಕೂಡ ಸಮಾಜಕ್ಕೆ ತಿಳಿಯುತ್ತದೆ.
ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇವರ ಸಾಧನೆ ಸಮಾಜಕ್ಕೆ ಕೊಡುಗೆಯಾಗಿ ಕಾಣುತ್ತದೆ. 1440 ವರ್ಷಗಳ ಇತಿಹಾಸವಿರುವ ಮಹಾಪುರುಷರ ಜಯಂತಿಯನ್ನು ಆಚರಿಸುವ ಮುಖಾಂತರ 6 ನೇ ಶತಮಾನದ ಅನಕ್ಷರಸ್ತೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ತದನಂತರ ಬಂದಂತಹ ವ್ಯಕ್ತಿಗಳು ಸಮಾಜ ಸುಧಾರಕರು, ಇವರುಗಳ ತಳಹದಿಯಿಂದ ಇತಿಹಾಸ ಮರುಕಳಿಸುವಂತಹ ಪ್ರಯತ್ನ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಈದ್‍ಮಿಲಾದುನ್ ಅಂಜುಮನ್ ಮೊಹಲ್ಲಾ ಕಮಿಟಿಯ ಅಧ್ಯಕ್ಷರಾದ ಅಂಜದ್  ಷರೀಫ್, ಎನ್.ಎ.ಟಿವಿಎಲ್ ಮಾಲೀಕರಾದ ಅನ್ಸರ್ ಷರೀಫ್, ಪುರಸಭಾ ಸದಸ್ಯರಾದ ಕೆ.ಮಹೇಶ್, ಮತ್ತು ಉಮೇಶ್, ಮುಖಂಡರಾದ ಮುಷಿಕರ್ ಅಹಮದ್ ಕುಟ್ಟಿ, ಅಕ್ಮಲ್ ಇಲಿಯಾಸ್, ನೂರ್‍ದಿನ್ ಖಾನ್, ಗೌಷರೀಫ್, ನಸೀಮ್, ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಈದ್‍ಮಿಲಾದುನ್ ಅಂಜುಮನ್ ಮೊಹಲ್ಲಾ ಕಮಿಟಿಯ ಅಧ್ಯಕ್ಷರಾದ ಅಂಜದ್  ಷರೀಫ್, ಎನ್.ಎ.ಟಿವಿಎಲ್ ಮಾಲೀಕರಾದ ಅನ್ಸರ್ ಷರೀಫ್, ಪುರಸಭಾ ಸದಸ್ಯರಾದ ಕೆ.ಮಹೇಶ್, ಮತ್ತು ಉಮೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Comment