ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷರಿಗೆ ಸನ್ಮಾನ

ಹುಬ್ಬಳ್ಳಿ, ಜು 9- ದಿ 24 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತಗೊಂಡ ಸಮಾಜ ಸೇವಕರಾದ ಸಂತೋಷ್ ಆರ್. (ಶೆಟ್ಟಿ) ಇವರನ್ನು ಹುಬ್ಬಳ್ಳಿಯ ಆದಿತ್ಯ ಬಿರ್ಲಾ ಕ್ಯಾಪಿಟಲ್ ವತಿಯಿಂದ ದಿ 5  ರಂದು ಅಕ್ಷಯ್ ಇನ್ ಹೊಟೆಲ್‍ನಲ್ಲಿ ಸನ್ಮಾನಿಸಲಾಯಿತು.
ಆದಿತ್ಯ ಬಿರ್ಲಾ ಕ್ಯಾಪಿಟಲ್‍ನ ಜೀವವಿಮಾ ಮತ್ತು ಹೂಡಿಕೆಗಳಲ್ಲಿ ಒಳ್ಳೆಯ ಲಾಭವಿದ್ದು, ಜನರು ಇದರ ಸದುಪಯೋಗ ಪಡೆಯಬೇಕೆಂದು ಸಂತೋಷ ತಿಳಿಸಿದರು. ಶಾಖಾ ಮುಖ್ಯಸ್ಥರಾದ  ರಾಜೇಶ್ವರ ಅವರು ಸಂತೋಷ ಶೆಟ್ಟಿ ಅವರಿಗೆ ಸನ್ಮಾನ ರೂಪದಲ್ಲಿ ನಾವು ಮಾಡಿದಂತಹ ಸಣ್ಣ ಸೇವೆ ಹಾಗೂ ಅವರ ಮಾರ್ಗದರ್ಶನ ಎಂದಿಗೂ ನಮ್ಮೊಂದಿಗಿರಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆದಿತ್ಯ ಬಿರ್ಲಾ ಗ್ರೂಪ್‍ನ ಪ್ರದೀಪ ಗಾಯಕೋಡೆ, ಪ್ರಕಾಶ ನಾಯ್ಕ, ಗಣೇಶ ಸಾಕೀನ, ರವೀಂದ್ರ ರಾಮದುರ್ಗಕರ ಮುಂತಾದವರು ಹಾಜರಿದ್ದರು.

Leave a Comment