ವಿಶ್ವನಾಥ್ ಗೆ ಬಾಯಿ ಚಪಲ: ನಾಗರಾಜ್ ಪ್ರಹಾರ

ಹುಬ್ಬಳ್ಳಿ,ಮೇ. 15- ಜೆಡಿಎಸ್ ರಾಜ್ಯಾದ್ಯಕ್ಷ ವಿಶ್ವನಾಥ್ ಗೆ ಬಾಯಿ ಚಪಲಾನೋ ಏನೋ ಅವರು ಸಿದ್ಧರಾಮಯ್ಯ ವಿರುದ್ಧ ಏನೇನೋ ಮಾತನಾಡ್ತಾರೆ ಪಾಪ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಖಾರವಾಗಿ ನುಡಿದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಸಿಕ್ಕ ಹಾಗೆ ಮಾತನಾಡಬಾರದಿತ್ತು. ದೇವರ ಆಶೀರ್ವಾದ ಇದ್ದರೆ ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಯಾರು ಏನೇ ಮಾತನಾಡಿದರೂ ಮೈತ್ರಿ ಸರ್ಕಾರ ಬೀಳುವುದಿಲ್ಲ. ಆಡಳಿತ ಸುರಳಿತವಾಗಿ ನಡೆದಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಕಾಮಗಾರಿಗಳು ಹಾಗೇ ಉಳಿದಿವೆ ಎಂದು ಅವರು ಹೇಳಿದರು.
ನನಗೆ ಪ್ರಸಕ್ತ ಎರಡು ಜಿ.ಪಂ. ಕ್ಷೇತ್ರಗಳ ಜವಾಬ್ದಾರಿ ವಹಿಸಲಾಗಿದೆ ಎರಡೂ ಕಡೆ ಅಚ್ಚು ಕಟ್ಟಾಗಿ ಕೆಲಸ ಮಾಡುತ್ತಿದ್ದೇನೆ ಎಂದ ಅವರು ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ ಎಂದು ಹೇಳಿದರು.

Leave a Comment