ವಿಶ್ವದಾಖಲೆ ಬರೆದ ಮಿಚೆಲ್ ಸ್ಟಾರ್ಕ್

ಬರ್ಮಿಂಗ್ ಹ್ಯಾಮ್: ಐಸಿಸಿ ಏಕದಿನ ವಿಶ್ವಕಪ್ ಎರಡನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ವಿಶ್ವ ದಾಖಲೆ ಬರೆದಿದ್ದಾರೆ.

ಎರಡನೇ ಸೆಮಿಫೈನಲ್ ನಲ್ಲಿ ಭರ್ಜರಿ ಜಯಗಳಿಸಿದ ಇಂಗ್ಲೆಂಡ್ ಫೈನಲ್ ಗೆ ಎಂಟ್ರಿ ಪಡೆದಿದೆ.  5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮುಗ್ಗರಿಸಿದೆ. ವಿಶ್ವಕಪ್ ನಲ್ಲಿ 27 ವಿಕೆಟ್ ಪಡೆಯುವ ಮೂಲಕ ಮಿಚೆಲ್ ಸ್ಟಾರ್ಕ್ ದಾಖಲೆ ನಿರ್ಮಿಸಿದ್ದಾರೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಅವರು ಬರೆದಿದ್ದಾರೆ. ಆಸ್ಟ್ರೇಲಿಯಾದ ಗ್ಲೆನ್ ಮೆಕ್ ಗ್ರಾತ್ 2007ರ ವಿಶ್ವಕಪ್ ನಲ್ಲಿ 26 ವಿಕೆಟ್ ಪಡೆದಿದ್ದು, ಇದುವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ಅಳಿಸಿಹಾಕಿದ್ದಾರೆ.

ಇಂಗ್ಲೆಂಡ್ ಆಟಗಾರ ಜೋ ರೂಟ್ ವಿಶ್ವಕಪ್ ಟೂರ್ನಿಯಲ್ಲಿ 12 ಕ್ಯಾಚ್ ಪಡೆದು ಗರಿಷ್ಟ ಕ್ಯಾಚ್ ಪಡೆದ ಫೀಲ್ಡರ್ ದಾಖಲೆಗೆ ಪಾತ್ರರಾಗಿದ್ದಾರೆ.

Leave a Comment