ವಿಶ್ವದಲ್ಲೇ ಅತ್ಯಂತ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಾಣ – ಅ-31ಕ್ಕೆ ಲೋಕಾರ್ಪಣೆ

ಸರ್ದಾರ್ ವಲ್ಲಭ ಭಾಯಿ ಪಟೇಲ್ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾಗಿದ್ದರು. ಪಟೇಲ್ ಜವಾಹರಲಾಲ್ ನೆಹರೂ ಸರ್ಕಾರದಲ್ಲಿ ದೇಶದ ಮೊದಲ ಉಪ ಪ್ರಧಾನಿಯೂ ಹೌದು. ಈ ಮಹಾನ್ ನಾಯಕನಿಗೆ ಗೌರವ ಸಲ್ಲಿಸಲು ಗುಜರಾತ್ ನಲ್ಲಿ ವಿಶ್ವದಲ್ಲೇ ಅತ್ಯಂತ ಎತ್ತರದ ಪಟೇಲ್ ಅವರ ಪ್ರತಿಮೆ ತಲೆ ಎತ್ತಲು ವೇದಿಕೆ ಸಜ್ಜುಗೊಳ್ಳುತ್ತಿದೆ. ೨,೯೯೦ ಕೋಟಿ ರೂ ವೆಚ್ಚದಲ್ಲಿ ಈ ಪ್ರತಿಮೆ ನಿರ್ಮಿಸಲಾಗುತ್ತಿದೆ. ಇದಕ್ಕೆ ಚೀನಾದ ಕಾರ್ಯಕರ್ತರು ಅಂತಿಮ ರೂಪ ನೀಡುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.

sardar-patel4

ಆದರೆ ಮುಂಬೈನ ಕಡಲ ಕಿನಾರೆಯಲ್ಲಿ ರಾಜ ಛತ್ರಪತಿ ಶಿವಾಜಿ ಪ್ರತಿಮೆ ಸ್ಮಾರಕಕ್ಕೆ ಮುಂಚಿತವಾಗಿ ಪಟೇಲ್ ಪ್ರತಿಮೆ ನಿರ್ಮಾಣಪೂರ್ಣಗೊಳ್ಳುತ್ತಿರುವುದು ವಿಶೇಷ. ಈ ಬೃಹದಾಕಾರದ ಎರಡು ಬೃಹತ್ ಪ್ರತಿಮೆಗಳಿಗೆ ಒಂದು ಶತಕೋಟಿ ಡಾಲರ್ ವೆಚ್ಚ ಮಾಡಲಾಗುತ್ತಿದೆ. ಇದು ಲಿಬರ್ಟಿ ಪ್ರತಿಮೆಗಿಂತ ಎರಡು ಪಟ್ಟು ಎತ್ತರವಿದೆ.

ಚೀನಾದಲ್ಲಿ ೧೨೮ ಮೀಟರ್ ಎತ್ತರವಿರುವ ಬುದ್ಧ ದೇವಾಲಯ ಪ್ರಸ್ತುತ ವಿಶ್ವದ ಅತ್ಯಂತ ದೊಡ್ಡ ಪ್ರತಿಮೆಯಾಗಿತ್ತು. ಗುಜರಾತ್ ನಲ್ಲಿ ನಿರ್ಮಿಸುತ್ತಿರುವ ಪಟೇಲ್ ಪ್ರತಿಮೆ ೧೮೨ ಮೀಟರ್ ನಷ್ಟು ಎತ್ತರವಿದೆ.

೧೭ನೇ ಶತಮಾನದಲ್ಲಿ ರಾಜ ಛತ್ರಪತಿ ಶಿವಾಜಿಯ ಪ್ರತಿಮೆ ೨೧೨ ಮೀಟರ್ ಎತ್ತರವಿದೆ. ಅತ್ಯಂತ ಪ್ರಕಾಶಮಾನವಾದ ಕುದುರೆ ಮತ್ತು ಖಡ್ಗ ಹಿಡಿದಿರುವ ಪ್ರತಿಮೆ ಇದಾಗಿದ್ದು ಇದು ೨೦೨೧ರ ಇಸವಿಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸೇನೆಯ ೨,೫೦೦ ಸಿಬ್ಬಂದಿ ಸೇರಿದಂತೆ ನೂರಾರು ಚೀನಾ ಕಾರ್ಮಿಕರು ಪಟೇಲ್ ಅವರ ಕಂಚಿನ ಪ್ರತಿಮೆಯನ್ನು ನಿರ್ಮಿಸಲು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಈ ಪ್ರತಿಮೆಯನ್ನು ಅ.೩೧ಕ್ಕೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಸರ್ದಾರ್ ಸರೋವರ ಅಣೆಕಟ್ಟು ಮೋದಿಯವರ ಕನಸಿನ ಕೂಸಾಗಿದ್ದು, ನ್ಯೂಯಾರ್ಕ್ ನಲ್ಲಿರುವ ಲಿಬರ್ಟಿ ಪ್ರತಿಮೆ ವೀಕ್ಷಿಸಲು ಪ್ರವಾಸಿಗರು ಬರುವ ರೀತಿಯಲ್ಲಿಯೇ ಪಟೇಲ್ ಪ್ರತಿಮೆ ಕಣ್ತುಂಬಿಕೊಳ್ಳಲು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ.

sardar-patel1

ಪಟೇಲ್ ಅವರ ಈ ಬೃಹದಾಕಾರದಲ್ಲಿ ನಿಂತಿರುವ ಪ್ರತಿಮೆಯನ್ನು ೧೫೩ ಮೀಟರ್ ಎತ್ತರದ ಗ್ಯಾಲರಿಯಲ್ಲಿ ನಿಂತು ಜನರು ವೀಕ್ಷಿಸಬೇಕಾಗುತ್ತದೆ. ಆದರೆ ಈ ಪ್ರತಿಮೆಯನ್ನು ವೀಕ್ಷಿಸಬೇಕಾದರೆ ಅಹಮದಾಬಾದ್‌ನಿಂದ ೨೫೦ ಕಿ.ಮೀ. ಪ್ರಯಾಣ ಮಾಡಬೇಕಾಗುತ್ತದೆ.

ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರಾಜಕೀಯ ಲಾಭಕ್ಕಾಗಿ ಈ ಬೃಹತ್ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಸ್ವಾತಂತ್ರ್ಯದ ನಂತರ ಜವಾಹರಲಾಲ್ ನೆಹರೂ ಸರ್ಕಾರದಲ್ಲಿ ಪಟೇಲ್ ಅವರು ಮೊದಲ ಉಪ ಪ್ರಧಾನಿಯಾಗಿದ್ದರು. ಆದರೆ ದೇಶದ ಮೊದಲ ಪ್ರಧಾನಿಯಾಗುವ ಎಲ್ಲ ಅವಕಾಶಗಳಿದ್ದರೂ ನೆಹರೂ ಸಾಮಾಜ್ಯ ಅಡ್ಡಗಾಲು ಹಾಕಿತು ಎಂದು ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಆರೋಪ ಮಾಡಿದ್ದುಂಟು.

ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭ ಭಾಯ್ ಪಟೇಲ್, ಸ್ವಾತಂತ್ರ್ಯ ನಂತರ ಮಾತುಕತೆಯ ಮೂಲಕ ಮನವೊಲಿಸಿ ರಾಜ ಪ್ರಭುತ್ವ ವಿರುವ ೫೫೦ ರಾಜ್ಯಗಳನ್ನು ಭಾರತಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದರು. ಆದರೆ ಮೂರು ವರ್ಷಗಳ ನಂತರ ನಿಧನರಾದರು.

ಮುಂದಿನ ವರ್ಷ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ೨೦೧೬ರಲ್ಲಿ ನರೇಂದ್ರ ಮೋದಿಯವರು ೩೬ ಬಿಲಿಯನ್ ವೆಚ್ಚದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

ಶಿವಾಜಿ ಪ್ರತಿಮೆ ನಿರ್ಮಾಣಕ್ಕಾಗಿ ವಸ್ತು ಸಂಗ್ರಹಾಲಯ, ಉದ್ಯಾನವನ ಮತ್ತು ಹೆಲ್ ಪ್ಯಾಡ್ ನಂತಹ ಪ್ರಾಥಮಿಕ ಕಾಮಗಾರಿಗಳು ನಡೆಯುತ್ತಿವೆ. ಆದರೆ ಪರಿಸರ ತಜ್ಞರು ಮತ್ತು ಸಾವಿರಾರು ಮೀನುಗಾರರು ಈ ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸ್ಮಾರಕ ನಿರ್ಮಾಣಕ್ಕೆ ತಗಲುವ ವೆಚ್ಚದ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. ತಜ್ಞರ ಪ್ರಕಾರ ರಾಜ್ಯ ಸರ್ಕಾರ ಈಗಾಗಲೇ ವಿನ್ಯಾಸವನ್ನು ಬದಲಾಯಿಸಿ ಖರ್ಚು ವೆಚ್ಚವನ್ನು ಕಡಿಮೆ ಮಾಡಿದೆ. ಈ ಶಿವಾಜಿ ಪ್ರತಿಮೆ ಹೇಗೆ ಕಾಣಿಸಲಿದೆ ಇದು ಯಾವಾಗ ಪೂರ್ಣವಾಗುತ್ತದೆ ಎಂಬುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

Leave a Comment