ವಿಶ್ವಗುರು ಶ್ರೀ ಕನಕದಾಸರ ವೈಭವದ ಭಾವಚಿತ್ರ ಮೆರವಣಿಗೆ

ರಾಯಚೂರು.ನ.06- ಸಂತ ಕವಿ ಶ್ರೀ ಕನಕದಾಸರ 530ನೇ ಜಯಂತ್ಯೋತ್ಸವ ನಿಮಿತ್ಯ ವಿಶ್ವಚೇತನ ಶ್ರೀ ಕನಕದಾಸರ ಭಾವಚಿತ್ರ ಮೆರವಣಿಗೆ ಅತ್ಯಂತ ವೈಭವದಿಂದ ನೆರವೇರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ರಾಜೇಂದ್ರ ಗಂಜ್ ವೃತ್ತದಲ್ಲಿರುವ ಶ್ರೀ ಕನಕದಾಸರ ಪುತ್ಥಳಿಗೆ ಗಣ್ಯರಿಂದ ವಿಶೇಷ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು. ಗಂಜ್ ವೃತ್ತದಿಂದ ಪ್ರಾರಂಭಗೊಂಡ ಸಂತ ಕವಿರವರ ಭಾವಚಿತ್ರ ಮೆರವಣಿಗೆ ಚಂದ್ರಮೌಳೇಶ್ವರ ವೃತ್ತ, ಶ್ರೀ ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಮಾರ್ಗವಾಗಿ ರಂಗಮಂದಿರದಲ್ಲಿ ಆಯೋಜಿಸಿರುವ ಬಹಿರಂಗ ಕಾರ್ಯಕ್ರಮಕ್ಕೆ ತಲುಪಿತು. ಕಲಾ ತಂಡಗಳ ಆಕರ್ಷಕ ನೃತ್ಯ ಮೆರವಣಿಗೆಯುದ್ಧಕ್ಕೂ ನೋಡುಗರ ಮನ ಸೆಳೆಯಿತು.
ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು, ಶಾಸಕರಾದ ಡಾ.ಶಿವರಾಜ್ ಪಾಟೀಲ್, ತಿಪ್ಪರಾಜು ಹವಾಲ್ದಾರ್, ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ರಾಜಾ ರಾಯಪ್ಪ ನಾಯಕ, ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ತಾ.ಪಂ.ಅಧ್ಯಕ್ಷೆ ಶಾರದಮ್ಮ ಬಾಲರಾಜ, ನಗರಸಭೆ ಅಧ್ಯಕ್ಷೆ ಹೇಮಲತಾ ಪಿ.ಬೂದೆಪ್ಪ, ಉಪಾಧ್ಯಕ್ಷ ಜಯಣ್ಣ, ಸದಸ್ಯರಾದ ರಾಮು ಗಿಲ್ಲೇರಿ, ಬೇವಿನ ಬೂದೆಪ್ಪ, ತಾ.ಪಂ. ಸದಸ್ಯ ಸಂಗಮೇಶ ಭಂಡಾರಿ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಎನ್.ಶಂಕ್ರಪ್ಪ, ಮುಖಂ‌ಡರಾದ ತ್ರಿವಿಕ್ರಮ್ ಜೋಷಿ, ಎಂ.ವಿರುಪಾಕ್ಷಿ, ಯೂಸೂಫ್ ಖಾನ್, ರವಿ ಪಾಟೀಲ್, ದೇವಣ್ಣ ನಾಯಕ ವಕೀಲರು, ಕೆ.ಶಾಂತಪ್ಪ,ದದ್ದಲ ಬಸವನಗೌಡ, ಜಗದೀಶ ವಕೀಲ, ಜಯವಂತರಾವ್ ಪತಂಗೆ, ಜಿಲ್ಲಾಧ್ಯಕ್ಷ ಕೆ.ಕರಿಯಪ್ಪ, ಡಿ.ಜಿ.ಕೇಶವ, ಹನುಮಂತಪ್ಪ ಜಾಲಿಬೆಂಚಿ, ನಾಗೇಂದ್ರಪ್ಪ ಮಟಮಾರಿ, ಕೆ.ವೇಣುಗೋಪಾಲ, ಜಂಬಣ್ಣ, ಹನುಮಂತು ವಕೀಲ, ಬಿ.ಬಸವರಾಜ, ಕೆ.ಪಂಪಾಪತಿ, ನಾಗರಾಜ, ವೆಂಕಟೇಶ ಹಿರಾ, ಮಲ್ಲಿಕಾರ್ಜುನ ಏಗನೂರು, ಬಾಲರಾಜ, ಸತೀಶಕುಮಾರ, ರಾಮಕೃಷ್ಣ, ಡ್ಯಾಡಿ ಗೋಪಾಲರೆಡ್ಡಿ, ಕೆ.ಗುರುಲಿಂಗಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ನೀಲಕಂಠ ಬೇವಿನ್, ಯುವ ಘಟಕಾಧ್ಯಕ್ಷ ಜಂಬಣ್ಣ ಮಂದಕಲ್, ಶೇಖರ ವಾರದ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment