ವಿಶ್ವಕಪ್ ಪುಟ್‌ಬಾಲ್ ಫೈನಲ್‌ಗೆ ಫ್ರಾನ್ಸ್

ಮಾಸ್ಕೋ, ಜು ೧೧- ಫಿಫಾ ರ್‍ಯಾಂಕಿಂಗ್‌ನಲ್ಲಿ ೩ನೇ ಸ್ಥಾನಗಳಿಸಿದ ಬಲಿಷ್ಠ ಬೆಲ್ಜಿಯಂಯನ್ನು ಮಣಿಸಿ ಫ್ರಾನ್ಸ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.

ರಷ್ಯಾದ ಸೇಂಟ್‌ಪೀಟರ್ಸ್ ಬರ್ಗ್ ಮೈದಾನದಲ್ಲಿ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಬಲಿಷ್ಟ ಬೆಲ್ಜಿಯಂ ತಂಡವನ್ನು ೧-೦ ಅಂತರದಿಂದ ಸೋಲಿಸಿದ ಫ್ರಾನ್ಸ್ ಗೆಲುವು ಸಾಧಿಸಿ ಫೈನಲ್ ತಲುಪಿದೆ.

ಈ ಭಾರಿ ಫಿಫಾ ವಿಶ್ವಕಪ್‌ನಲ್ಲಿ ಪಂದ್ಯದ ಆರಂಭದಿಂದಲೂ ಉತ್ತಮ ಫಾರ್ಮ್‌ನಲ್ಲಿದ್ದ ಬೆಲ್ಜಿಯಂಗೆ ಸೆಮಿಫೈನಲ್ ಕಾದಾಟದಲ್ಲಿ ಒಂದು ಗೋಲು ಬಾರಿಸದೇ ನಿರಾಶದಾಯಕವಾಗಿ ಸೋಲು ಅನುಭವಿಸಿತ್ತು.
ಪಂದ್ಯದ ದ್ವಿತೀಯಾರ್ಧದಲ್ಲಿ ಸಿಡಿಸಿದ ಗೋಲ್ ನೆರವಿನಿಂದ ಫ್ರಾನ್ಸ್ ಗೆಲುವನ್ನು ಸಂಭ್ರಮಿಸಿತು. ಫ್ರಾನ್ಸ್‌ನ ಸ್ಯಾಮ್ಯುಯೆಲ್ ಉಮ್ಟಿಟಿ ಅವರು ೫೧ನೇ ನಿಮಿಷದಲ್ಲಿ ಗೋಲ್ ಬಾರಿಸಿ ಫ್ರಾನ್ಸ್ ವಿಜಯದ ನಗು ಬೀರುವಂತೆ ಮಾಡಿದರು.

ಫ್ರಾನ್ಸ್ ೪೫ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸುವ ಅವಕಾಶವನ್ನು ಲುಕಾಕು ಅವರು ತಪ್ಪಿಸಿದರು. ೬೧ನೇ ನಿಮಿಷದಲ್ಲಿ ಬೆಲ್ಜಿಯಂನ ಕೆವಿನ್ ಡೆ ಬ್ರುಯಿನ್ ಅವರು ಗೋಲ್ ಬಾರಿಸಿ ಫ್ರಾನ್ಸ್ ನೀಡಿದ್ದ ೧-೦ ಅಂತರವನ್ನು ಸರಿದೂಗಿಸಲು ಪ್ರಯತ್ನಿಸಿದ್ದರು. ಆದರೆ ಆ ಹೊಡೆತದಿಂದ ಚಿಮ್ಮಿದ ಗೋಲ್ ನೇರವಾಗಿ ಫ್ರಾನ್ಸ್ ಗೋಲ್ ಕೀಪರ್ ಹ್ಯೂಗೋ ಲಾಲೋರಿಸ್ ಅವರ ಕೈ ಸೇರಿತ್ತು. ಪಂದ್ಯದ ಪ್ರಥಮಾರ್ಧಲ್ಲಿ ೧ ಹೆಚ್ಚುವರಿ ನಿಮಿಷ ಮತ್ತು ದ್ವಿತೀಯಾರ್ಧದಲ್ಲಿ ೬ ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಬೆಲ್ಜಿಯಂ ಗೋಲ್ ದಾಖಲಿಸಲು ವಿಫಲವಾಯಿತು. ಪಂದ್ಯದ ವೇಳೆ ಬೆಲ್ಜಿಯಂ ಪರ ೩, ಫ್ರಾನ್ಸ್ ಪರ ೨ ಬಾರಿ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು.

ಬೆಲ್ಜಿಯಂನಲ್ಲಿನ ಇ ಹಜಾರ್ಡ್, ಲುಕಾಕು, ವರ್ಟೊಂಗನ್‌ನಂತಹ ಅಪಾಯಕಾರಿ ಆಟಗಾರರ ನಡುವೆ ಫ್ರಾನ್ಸ್ ತನ್ನ ಆಟಗಾರರ ಚುರುಕಿನ ಹಾಗೂ ಒತ್ತಡದ ಆಟ ಪ್ರದೇಶಿಸುವ ಮೂಲಕ ಫೈನಲ್ ಪ್ರವೇಶಿಸಿದೆ.

 

Leave a Comment