ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ, ತರಬೇತಿ ನೀಡಿದರೆ ಹೆತ್ತವರಿಗೆ ಆಸರೆ, ಸಮಾಜಕ್ಕೆ ಮಾದರಿ, ದೇಶಕ್ಕೆ ಆಸ್ತಿಯಾಗುತ್ತಾರೆ: ಆರ್. ಅಶೋಕ್

ಬೆಂಗಳೂರು,  ಜು 4 – ದೃಷ್ಟಿ ವಿಶೇಷ ಚೇತನ ಮಕ್ಕಳಿಗೆ ಉತ್ತಮ ಶಿಕ್ಷಣ, ಅಗತ್ಯ ತರಬೇತಿ ನೀಡಿದರೆ ಅವರ  ಸ್ವಾವಲಂಬಿ ಬದುಕಿಗೆ ಭದ್ರ ಬುನಾದಿ ಹಾಕಲು ಸಹಕಾರಿಯಾಗಲಿದೆ ಎಂದು ಬಿಜೆಪಿ ಹಿರಿಯ  ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹೇಳಿದ್ದಾರೆ.

ನಗರದ  ರಮಣಮಹರ್ಷಿ ದೃಷ್ಟಿ ವಿಶೇಷ ಚೇತನ ಮಕ್ಕಳಿಗೆ ಬ್ಲೈಂಡ್ ಸ್ಲೇಟ್ ಸೇರಿ ಶಿಕ್ಷಣ  ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳ ಸಮಗ್ರ ಶಿಕ್ಷಣ ಇಂದಿನ ಅಗತ್ಯವಾಗಿದೆ.  ಅಂಧ ಮಕ್ಕಳಿಗೆ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ, ತರಬೇತಿ ನೀಡಿದರೆ ಅವರು ಹೆತ್ತವರಿಗೆ  ಆಸರೆಯಾಗುತ್ತಾರೆ. ಸಮಾಜಕ್ಕೆ ಮಾದರಿಯಾಗುತ್ತಾರೆ. ದೇಶಕ್ಕೆ ಆಸ್ತಿಯಾಗುತ್ತಾರೆ ಎಂದರು.

ದೃಷ್ಟಿ ವಿಕಲಚೇತನ ಮಕ್ಕಳಲ್ಲಿ ವಿಶೇಷತೆ ಇರುತ್ತದೆ. ಅವರ ನೆನಪಿನ ಶಕ್ತಿ  ಅಗಾಧ. ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಪತ್ತೆ ಮಾಡಿ ಸೂಕ್ತ ತರಬೇತಿ ನೀಡಿದರೆ  ಅದ್ಭುತವಾದದ್ದನ್ನು ಸಾಧಿಸುತ್ತಾರೆ ಎಂದರು.

ದೃಷ್ಟಿ ವಿಶೇಷ ಚೇತನ ಮತ್ತು  ದಿವ್ಯಾಂಗ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಇಂದಿನ ಅಗತ್ಯವಾಗಿದೆ. ತಂತ್ರಜ್ಞಾನ  ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಮಕ್ಕಳನ್ನು ಸಜ್ಜುಗೊಳಿಸಬೇಕು.   ತಾಂತ್ರಿಕೆಯ  ಬೆಳೆವಣಿಗೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಅಶೋಕ್ ಹೇಳಿದರು.

ತಮ್ಮ ಜನ್ಮ ದಿನದ ಹಿನ್ನೆಲೆಯಲ್ಲಿ ಆರ್. ಅಶೋಕ್, 300ಕ್ಕೂ ಹೆಚ್ಚು ಮಕ್ಕಳಿಗೆ ಅನ್ನದಾನ ಏರ್ಪಡಿಸಿ ತಾವೂ ಕೂಡ ಊಟ ಸೇವಿಸಿ, ಕೇಕ್ ಕತ್ತರಿಸಿದರು.

ಪಟ್ಟಾಭಿರಾಮನಗರ  ಪಾಲಿಕೆ ವಾರ್ಡ್‌ನ ಮಾಜಿ ಸದಸ್ಯ ಸಿ.ಕೆ. ರಾಮಮೂರ್ತಿ ಮಾತನಾಡಿ, ಪ್ರತಿ ವರ್ಷವೂ ರಕ್ಷಾ  ಫೌಂಡೇಶನ್‌ನಿಂದ  ಬಡ ಮಕ್ಕಳ ಶಿಕ್ಷಣಕ್ಕೆ ಅತಿ ಹೆಚ್ಚಿನ ಪ್ರೋತ್ಸಾಹ  ನೀಡುತ್ತಿದ್ದೇವೆ. ರಮಣ ಮಹರ್ಷಿ ಶಾಲೆಯ ಅಂಧ ಮಕ್ಕಳಿಗೂ ನಾವು ಹೆಚ್ಚಿನ ಸಹಕಾರ  ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ಪಾಲಿಕೆ ಸದಸ್ಯರಾದ ಎನ್  ನಾಗರಾಜ್, ನಾಗರತ್ನ ರಾಮಮೂರ್ತಿ, ಭೈರಸಂದ್ರ ನಾಗರಾಜ್, ಹಾಗೂ ಬಿಜೆಪಿಯ ನಾಯಕರಾದ  ನಟರಾಜ್ ಎಸ್ ಕೆ, ಸೋಮಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Leave a Comment