ವಿಶೇಷತೆಗಳ ತಾರಾಕಸುರ

ರಥಾವರ ಚಿತ್ರದ ಬಳಿಕ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ’ತಾರಾಕಸುರ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.ಈ ಚಿತ್ರದ ಮೂಲಕ ನಿರ್ಮಾಪಕ ನರಸಿಂಹಲು ಪುತ್ರ ವೈಭವ್ ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ.

tarakasura_144

ಒಂದೂವರೆ ವರ್ಷದ ಬಳಿಕ ಚಿತ್ರ ನಿರ್ದೇಶನ ಮಾಡುತ್ತಿದ್ದು ನಿರ್ಮಾಪಕ ನರಸಿಂಹಲು, ವೈಭವ್ ತೋರಿಸಿ ನಾಯಕನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಬಹುದೇ ನೋಡಿ ಎಂದು. ಚಿತ್ರದಲ್ಲಿ ಮೂರು ಶೇಡ್ ಪಾತ್ರಗಳಿರುವುದರಿಂದ ಮೊದ ಮೊದಲು ಈ ಹುಡುಗ ಮಾಡುತ್ತಾನೆಯೇ ಎನ್ನುವ ಅನುಮಾನ ಕಾಡಿತ್ತು.

ಆ ನಂತರ ಚಿತ್ರಕ್ಕೆ ಸಂಬಂಧಿಸಿದ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆ ಹಂತಕ್ಕೆ ಬಂದಿದೆ. ಈ ಚಿತ್ರದ ಮೂಲಕ ವೈಭವ್ ನಾಯಕನಾಗಿ ಚಿತ್ರರಂಗದಲ್ಲಿ ನಾಯಕನಾಗಿ ಗುರುತಿಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಕಳೆದವಾದ ಚಿತ್ರದ ಸಿಡಿ ಬಿಡುಗಡೆ ಸಮಾರಂಭವಿತ್ತು. ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಸೇರಿದಂತೆ ಹಲವರು ಆಗಮಿಸಿ ಚಿತ್ರಕ್ಕೆ ಶುಭಹಾರೈಸಿದರು.

tarakasura_138

ಹಿರಿಯ ನಟ ಸಾಧುಕೋಕಿಲ ಮಾತನಾಡಿ, ಚಿತ್ರದಲ್ಲಿ ನಾಯಕನ ಜೊತೆ ಸಂಪೂರ್ಣ ಇರುತ್ತೇವೆ. ಒಳ್ಳೆಯ ಹಾಡುಗಳಿವೆ.ಚಿತ್ರ ಹಿಟ್ ಆಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಅಭಿಪ್ರಾಯ ಹೊರಹಾಕಿದರು.ಮತ್ತೊಬ್ಬ ನಿರ್ದೇಶಕ ನಾಗೇಂದ್ರ ಪ್ರಸಾದ್, ರಾಜ್ಯದಲ್ಲಿ ಸ್ಪೀಡ್ ಆಗಿ ಕೀ ಬೋರ್ಡ್ ಬಾರಿಸುವಲ್ಲಿ ಸಾಧುಕೋಕಿಲ ಮತ್ತು ಹರಿಕೃಷ್ಣ ಮುಂಚೂಣಿಯಲ್ಲಿದ್ದಾರೆ ಅದೇ ರೀತಿ ರಿದಂನಲ್ಲಿ ಧರ್ಮವಿಶ್ ಇದ್ದಾರೆ ಎಂದರು.

ಸಂಗೀತ ನಿರ್ದೇಶಕ ಧರ್ಮವಿಶ್, ಬಾಲಿವುಡ್‌ನಲ್ಲಿ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಮಾಡುತ್ತಿದ್ದೆ. ಕನ್ನಡದಲ್ಲಿ ಹೆಚ್ಚು ಅವಕಾಶ ಸಿಕ್ಕರೆ ಇಲ್ಲೇ ಇರುತ್ತೇನೆ. ಚಿತ್ರದಲ್ಲಿ ಐದು ಹಾಡುಗಳಿವೆ ಎಲ್ಲವೂ ವಿಭಿನ್ನವಾಗಿ ಮೂಡಿ ಬಂದಿವೆ ಎಂದು ಹೇಳಿಕೊಂಡರು. ವೈಭವ್‌ಗೆ ಮಾನ್ವಿತಾ ಹರೀಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

 

Leave a Comment