ವಿವೋ ಪ್ರೋ ಕಬಡ್ಡಿ ಲೀಗ್ ಜತೆ ಬಿಕೆಟಿ ಒಪ್ಪಂದ

ಬೆಂಗಳೂರು, ಅ. ೧೦- ಬಾಲಕೃಷ್ಣ ಇಂಡಸ್ಟ್ರೀಸ್ ಲಿಮಿಟೆಡ್ (ಬಿಕೆಟಿ) 2018-19ನೇ ಸಾಲಿನ ವಿವೋ ಪ್ರೋ ಕಬಡ್ಡಿ ಲೀಗ್‌ಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಪ್ರಕಾರ ಬಿಕೆಟಿಯ ಲೋಗೋ ಬೆಂಗಳೂರು ಬುಲ್ಸ್ ಸೇರಿದಂತೆ ಪ್ರತಿನಿಧಿಸುವ ಎಲ್ಲ ಏಳು ತಂಡಗಳ ಅಧಿಕೃತ ಕಿಟ್‌ನಲ್ಲಿ ಇರಲಿದೆ ಎಂದು ಬಿಕೆಟಿ ಟೈಱ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಪೊದ್ದಾರ್ ತಿಳಿಸಿದ್ದಾರೆ.

2018-19ನೇ ಸೀಸನ್‌ನ ವಿವಿ ಪ್ರೋ ಕಬಡ್ಡಿ ಲೀಗ್‌ನ ಉದ್ದಕ್ಕೂ ಪ್ರಚಾರ ಸಾಮಾಗ್ರಿಗಳಲ್ಲಿ ಬಿಕೆಟಿ ಲೋಗೋ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ಪಾಲುದಾರಿಕೆಯಿಂದ ಬಿಕೆಟಿ ಸಮೂಹ ಕಬಡ್ಡಿಗೆ ಬೆಂಬಲ ನೀಡಲಿದ್ದು, ವಿಶಿಷ್ಟ ಕ್ರೀಡೆಯ ಬೆಳವಣಿಗೆಗೆ ಸಹಕರಿಸಲಿದೆ. ಇದರಿಂದ ಕರ್ನಾಟಕದ ಕ್ರೀಡಾ ಪ್ರತಿಭೆಗಳು ಬೆಳೆಯಲು ಮತ್ತು ಲೀಗ್‌ನ ಗಮನ ಸೆಳೆಯಲು ನೆರವಾಗಲಿದೆ ಎಂದು ಹೇಳಿದ್ದಾರೆ.

ಪ್ರೋ ಕಬಡ್ಡಿ 6ನೇ ಸೀಸನ್‌ನಲ್ಲಿ ಬಿಕೆಟಿ ಟೈಱ್ಸ್‌ನ್ನು ಪ್ರಮುಖ ಪಾಲುದಾರರಾಗಿ ಬೆಂಗಳೂರು ಬುಲ್ಸ್ ಸ್ವಾಗತಿಸಲಿದೆ ಎಂದು ಡಬ್ಲ್ಯುಎಲ್ ಲೀಗ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯ ಸಿನ್ಹಾವಾಲಾ ತಿಳಿಸಿದ್ದಾರೆ.

ವಿವೋ ಪ್ರೋ ಕಬಡ್ಡಿ ತಂಡ ಭಾಗವಹಿಸುವ ತಂಡಗಳನ್ನು ತಲಾ ಆರು ತಂಡಗಳ ಎರಡು ವಲಯಗಳಾಗಿ ವಿಂಗಡಿಸಲಾಗಿದೆ.

ಏಳು ಅಂತರ ವಲಯ ಪಂದ್ಯಗಳನ್ನು ಮತ್ತು ಪ್ರತಿ ತಂಡ ಆಡಲಿದೆ. ಬಳಿಕ ಪ್ಲೇ ಆಫ್ ಪಂದ್ಯಗಳಿರುತ್ತವೆ. ಪ್ಲೇ ಆಫ್ ಹಂತದಲ್ಲಿ 3 ಎಲಿಮಿನೇಟರ್‌ಗಳು ಇರಲಿದೆ. ಅಂತಿಮವಾಗಿ ಎರಡು ಕ್ವಾಲಿಫ್ಲೈಯರ್‌ಗಳು ಮತ್ತು ಫೈನಲ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ.

Leave a Comment