ವಿವೇಶನ ಹಂಚಿಕೆ ತನಿಖೆ : ಪೌರಾಯುಕ್ತರ ವರ್ಗಾವಣೆಗೆ ಮನವಿ

ರಾಯಚೂರು.ಅ.15- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಲೀಸ್ ಕಂ ಸೇಲ್ ನಿವೇಶನ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ರಾಯಚೂರು ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯೆ ವಹಿಸಿದ ನಗರಸಭೆ ಪೌರಾಯುಕ್ತರನ್ನು ವರ್ಗಾಯಿಸಬೇಕು ಹಾಗೂ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷರ ಚುನಾವಣೆ ತಕ್ಷಣವೇ ನಿಗದಿ ಪಡಿಸಬೇಕೆಂದು ರಾಯಚೂರು ನಗರ ಉಸ್ಮಾನಿಯ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀರಾಮುಲು ಅವರನ್ನು ಭೇಟಿಯಾಗಿ ನಿವೇಶನ ಹಂಚಿಕೆಯಲ್ಲಿ ನಡೆದ ಅವ್ಯವಹಾರದೊಂದಿಗೆ ಈಗಾಗಲೇ ದೂರು ನೀಡಲಾಗಿದೆ. 1032 ಪುಟಗಳ ವರದಿಯನ್ನು ಸಿದ್ಧಪಡಿಸಲಾಗಿದೆ. ಆದರೆ, ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನಗರಾಭಿವೃದ್ಧಿಗೆ ಸಂಬಂಧಿಸಿ ನಗರಸಭೆ ಪೌರಾಯುಕ್ತರು ಸಂಪೂರ್ಣ ನಿರ್ಲಕ್ಷ್ಯೆ ವಹಿಸಿದ್ದಾರೆ.
ಇಂತಹ ಪೌರಾಯುಕ್ತರಿಂದ ನಗರಾಭಿವೃದ್ಧಿ ನಿರೀಕ್ಷಿಸಲಾರದು. ಕಾರಣ ತಕ್ಷಣವೇ ಅವರನ್ನು ವರ್ಗಾಯಿಸುವಂತೆ ಒತ್ತಾಯಿಸಲಾಯಿತು. ಕಳೆದ 14 ತಿಂಗಳಿಂದ ನಗರಸಭೆ, ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷರ ಚುನಾವಣೆ ನೆನೆಗುದಿಗೆ ಬಿದ್ದಿದ್ದು, ತಕ್ಷಣವೇ ದಿನಾಂಕ ನಿಗದಿ ಪಡಿಸಲು ಒತ್ತಾಯಿಸಲಾಯಿತು. ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ತಾವೇ ಅಡಿಗಲ್ಲು ಸಮಾರಂಭ ಕೈಗೊಂಡಿದ್ದು, ಆದರೆ, ಈ ಮಾರುಕಟ್ಟೆ ನಿರ್ಮಾಣಗೊಳ್ಳದಿರುವ ಬಗ್ಗೆಯೂ ಅವರ ಗಮನ ಸೆಳೆಯಲಾಗಿದೆ.
ಈ ಸಂದರ್ಭಧಲ್ಲಿ ಅಧ್ಯಕ್ಷರಾದ ಎನ್.ಮಹಾವೀರ, ಮಹ್ಮದ್ ಶಹಾಜಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment