ವಿವೇಕಾನಂದ ಕುರಿತ ವಿಚಾರ ಸಂಕಿರಣ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಸೆ. ೧೦- ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ಸ್ವದೇಶಿ ಸಂಘ ವಿಚಾರ ಸಂಕಿರಣವನ್ನು ಆಯೋಜಿಸಿದೆ.
ಹಲಸೂರಿನ ರಾಮಕೃಷ್ಣ ಮಠ ಹಾಗೂ ಸ್ವದೇಶಿ ಸಂಘ ಸಂಯುಕ್ತಾಶ್ರಯದಲ್ಲಿ ಮಾರತ್‌ಹಳ್ಳಿಯ ನ್ಯೂ ಆರಿಜನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಜೆ 5 ರಿಂದ 8ರವರೆಗೆ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸ್ವದೇಶಿ ಸಂಘ ಸಂಸ್ಥಾಪಕ ಹಿಮಾದ್ರಿದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ಗೌರವಾರ್ಥ ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಪ್ರಮುಖವಾಗಿ ವಿವೇಕಾನಂದರ ಆದರ್ಶ ಹಾಗೂ ಸ್ವದೇಶಿ ಕುರಿತಂತೆ ಮಕ್ಕಳು ಹಾಗೂ ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ಭಾರತದ ಅಭಿವೃದ್ಧಿಗಾಗಿ ಪರಿಸರ ಸಂರಕ್ಷಣೆ, ಆರೋಗ್ಯ ಶಿಬಿರ, ಕ್ರೀಡಾಭಿವೃದ್ಧಿ, ಯೋಗ ಬೆಳವಣಿಗೆ, ಹಲವಾರು ವಿಚಾರ ಸಂಕಿರಣಗಳನ್ನು ಯಾವುದೇ ಬೇಧಭಾವವಿಲ್ಲದೆ ಆಯೋಜಿಸಲಾಗಿದೆ. ಈ ಮೂಲಕ ಅಡಗಿರುವ ಪ್ರತಿಭೆ, ಸಂಸ್ಕೃತಿ, ಸಂಪತ್ತನ್ನು ಹೊರ ತರುವ ಉದ್ದೇಶ ಹೊಂದಲಾಗಿದೆ ಎಂದರು.
ವಿಚಾರ ಸಂಕಿರಣಕ್ಕೆ ರಾಮಕೃಷ್ಣ ಮಠದ ಶ್ರೀಗಳಾದ ತಟ್ಟಾವರೂಪನಂದಜಿ, ಐಐಎಂನ ನಿವೃತ್ತ ಪ್ರೊ. ವಿದ್ಯಾನಾಥನ್, ಮೇಘಾಲಯ ರಾಜ್ಯಪಾಲ ತಾತಾಂಗತರಾಯ್, ಸಂಸದ ಪಿ.ಸಿ ಮೋಹನ್, ಶಾಸಕ ಅರವಿಂದ ಲಿಂಬಾವಳಿ, ಆರಿಜನ್ ಕಾಲೇಜು ಅಧ್ಯಕ್ಷ ಡಾ. ಮನಂಗನಾನಿ ಉಪಸ್ಥಿತರಿರುವರು ಎಂದು ತಿಳಿಸಿದರು.

Leave a Comment