ವಿವೇಕಾನಂದರ ಚಿಕ್ಯಾಗೋ ಭಾಷಣದ 125ನೇ ವರ್ಷಾಚರಣೆ

ಧಾರವಾಡ, ಸೆ 12-  1893 ಸಪ್ಟಂಬರ 11 ರಂದು ಅಮೇರಿಕಾದ ಚಿಕ್ಯಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣದ 125 ನೇ ವರ್ಷಾಚರಣೆಯನ್ನು ಇಲ್ಲಿಯ `ಪುರಸ್ಕಾರ ಸಂಸ್ಥೆ’ ಯಿಂದ ಆಚರಿಸಿ `ವಿಶ್ವವಿಜೇತ’ರಿಗೆ ಗೌರವವನ್ನು ಸಮರ್ಪಿಸಲಾಯಿತು.
`ಏಳಿ ! ಎದ್ದೇಳಿ !! ಗುರಿ ಮುಟ್ಟುವವರೆಗೆ ನಿಲ್ಲದಿರಿ’ ಎಂದು ಸಿಂಹಘರ್ಜನೆ ಮಾಡಿದ ಯುವ ಸನ್ಯಾಸಿ ಸ್ವಾಮಿ ವಿವೇಕಾನಂದರು ಇಡೀ ವಿಶ್ವಕ್ಕೆಯೇ ಮಾರ್ಗದರ್ಶನ ಮಾಡಿದರು. ಅಲ್ಪಾಯುಷ್ಯದಲ್ಲಿಯೇ ಸಾವಿರಾರು ವರ್ಷಗಳಷ್ಟು ಮಾಡಬಹುದಾದ ಕಾರ್ಯಗಳನ್ನು ಸ್ವಾಮೀಜಿಯವರು ತಮ್ಮ ಅಲ್ಪಾಯುಷ್ಯದಲ್ಲಿಯೇ ಮಾಡಿತೋರಿಸಿದರು. ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಅವರ ಭಾಷಣದಿಂದ ಇಡೀ ಜಗತ್ತೇ ಪ್ರಭಾವಿತವಾಯಿತು. ಅವರ ಸಂದೇಶಗಳು ಇಂದಿಗೂ ಅಮರವಾಗಿದ್ದು, ಆ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದದ್ದು ಅವಶ್ಯವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಪುರಸ್ಕಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೃಷ್ಣ ಜೋಶಿ ಹೇಳಿದರು.
ವೀರಸನ್ಯಾಸಿಯಾಗಿ, ವಿಶ್ವವಿಜೇತರಾಗಿ, ವಿಶ್ವಮಾನವರಾಗಿ ಬಾಳಿಬದುಕಿದ ಪೂಜ್ಯ ವಿವೇಕಾನಂದರಿಂದ ಪ್ರಭಾವಿತರಾದ ಲಕ್ಷಾವಧಿ ಜನರು ಅವರ ಅನುಯಾಯಿಗಳಾಗಿ ಅವರ ಸಂದೇಶಗಳನ್ನು ಮುಂದುವರೆಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಪ್ರಾಣೇಶ ಪಾಶ್ಚಾಪೂರ, ಬಿ. ಎನ್. ಪಾಟೀಲ, ರಮೇಶ ದೇಸಾಯಿ, ಪ್ರಕಾಶ ಕುಲಕರ್ಣಿ, ಎಂ. ಬಿ. ಬೇನಪ್ಪನವರ, ಎಂ. ಎಂ. ಕಲ್ಲಿಕರೆಣ್ಣವರ, ಮುರಲಿಧರ ರಾವ್, ಪ್ರೊ. ಬೆಂಜಮಿನ್ ಸಕ್ರಿ, ಜಯಶ್ರೀ ಕುಲಕರ್ಣಿ ಮತ್ತಿತರರು ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment