ವಿವೇಕಾನಂದರ ಆದರ್ಶ ದಾರಿದೀಪ

ರಾಮದುರ್ಗ, ಜ 12-  ಸ್ವಾಮಿ ವಿವೇಕಾನಂದರ ಆದರ್ಶ ಯುವ ಜನರಿಗೆ ದಾರಿ ದೀಪವಾಗಿದೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕೆಂದು ಬಿಜೆಪಿ ಯುವ ಮುಖಂಡ ಮಲ್ಲಣ್ಣ ಯಾದವಾಡ ಹೇಳಿದರು.

 
ತಾಲೂಕಿನ ಮುದೇನೂರದಲ್ಲಿ ಮೌಲ್ಯ ಸಂಪದ ಸ್ವಯಂ ಸೇವಾ ಸಂಸ್ಥೆ, ಡಿ. ಸಿ. ಚಿಕ್ಕನಗೌಡ್ರ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೇನೂರ ಮತ್ತು ವಿಜಯ ವಿದ್ಯಾವರ್ಧಕ ಪ್ರೌಡಶಾಲೆ ಬಟಕುರ್ಕಿ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 155ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಯುವಜನ ವಿವೇಕ ಸಪ್ತಾಹ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನಿಬಂಧ ಹಾಗೂ ಭಾಷಣ ಸ್ಪರ್ದೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಭವ್ಯ ಸಂಸ್ಕೃತೀಯನ್ನು ಪ್ರಪಂಚಕ್ಕೆ ಪರಿಚಯಿಸಿದ ವಿವೇಕಾನಂದರು ಈ ದೇಶ ಸಾಂಸ್ಕೃತೀಕ ರಾಯಭಾರಿ ಎಂದು ಹೇಳಿ ಅವರ ಜೀವನ ಇಂದಿನ ಯುವ ಜನಾಂಗಕ್ಕೆ ಆದರ್ಶವೆಂದರು.

 
ಮುದೇನೂರದ ಗೌರಿ ಶಂಕರಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಡಿ. ಸಿ. ಚಿಕ್ಕನಗೌಡ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್. ಬಿ. ಪತ್ತಾರ ವಹಿಸಿದ್ದರು. ಅತಿಥಿಗಳಾಗಿ ರುದ್ರಗೌಡ ಚಿಕ್ಕನಗೌಡ್ರ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ. ವಿ. ಪಾಟೀಲ, ಸಾವಯವ ಕೃಷಿ ಸಾಧಕ ಅಜ್ಜಪ್ಪ ಕುಲಗೋಡ, ಎಸ್. ಎಂ. ಕಲ್ಲೂರ, ಶಂಕ್ರಮ್ಮ ಮುಗಳಿ, ಅವರನ್ನು ಸನ್ಮಾನಿಸಲಾಯಿತು.

 
ವೈದ್ಯ ಮಹೇಶ ಮಠಪತಿ, ವಿ. ವಿ. ಗಾಣಿಗೇರ, ಶಿಕ್ಷಕಿ ಬಿ. ಎಸ್. ಸಣ್ಣಪ್ಪನವರ, ಎಚ್. ಎಫ್. ಡಂಗಿ ಇದ್ದರು.
ಎಸ್. ವಿ. ಕಲ್ಯಾಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಉದಾನಶೆಟ್ಟಿ ಸ್ವಾಗತಿಸಿದರು. ಸೊಮಶೇಖರ ಸೊಗಲದ ನಿರೂಪಿಸಿದರು. ಮಹಾಂತೇಶ ಗಣಾಚಾರಿ ವಂದಿಸಿದರು

 

 

.

Leave a Comment