ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ರಾಯಚೂರು.ಅ.12- ಆಟೋ ಚಾಲಕರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಜೈ ಕರ್ನಾಟಕ ರಕ್ಷಣ ವೇದಿಕೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿತು.
ಅವರು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸ್ಥಾನಿಕ ಅಧಿಕಾರಿ ಮುಖಾಂತರ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರಿಗೆ ಮನವಿ ಸಲ್ಲಿಸಿ, ಆಟೋ ಚಾಲನೆ ಮಾಡಿ ತಮ್ಮ ಜೀವನ ನಡೆಸಲು ಪರದಾಡುವಂತಹ ಪರಿಸ್ಥಿತಿ ಆಟೋ ಚಾಲಕರದ್ದಾಗಿದೆ. ಸರಿಯಾಗಿ ಆಟೋ ನಿಲ್ದಾಣ ವ್ಯವಸ್ಥೆ ಇರುವುದಿಲ್ಲ. ಮನೆ ಬಾಡಿಗೆ , ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚು ವೆಚ್ಛಗಳನ್ನು ಬಂದ ಹಣದಲ್ಲಿ ನಿಭಾಯಿಸಲು ಕಷ್ಟಸಾಧ್ಯವಾಗಿದೆ ಎಂದರು.
ಸರಕಾರದ ವತಿಯಿಂದ ಆಟೋ ಚಾಲಕರಿಗೆ ವಸತಿ ಯೋಜನೆಯಡಿ ಮನೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಹಸ್ತ ನೀಡಬೇಕಾಗಿರುವುದು ಅವಶ್ಯ. ವಸತಿ ಯೋಜನೆಯಲ್ಲಿ ಮುಖ್ಯವಾಗಿ ಆಟೋ ಚಾಲಕರಿಗೆ ಪ್ರಾಧಾನ್ಯತೆ ನೀಡಬೇಕೆಂದು ಒತ್ತಾಯಿಸಿಲಾಯಿತು.
ಆಟೋ ಚಾಲಕರು ಕಳೆದ 30-40ವರ್ಷದಿಂದ ಆಟೋ ಚಲಾಯಿಸಿ, ವಯಸ್ಸಾದ 60 ವರ್ಷ ಮೇಲ್ಪಟ್ಟ ಆಟೋ ಚಾಲಕರಿಗೆ ಪಿಂಚಣಿ ನಿಗದಿಗೊಳಿಸಿ, ಹಾಗೂ ಉಚಿತ ಇನ್ಸೂರೆನ್ಸ್ ವ್ಯವಸ್ಥೆ ಕಲ್ಪಿಸಬೇಕು.
ಆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಚ್. ಅಶೋಕಶೆಟ್ಟಿ, ಉಪಾಧ್ಯಕ್ಷ ಸಿದ್ಧರಾಮ ಸಿಂಧೆ, ಗೌರವಾಧ್ಯಕ್ಷ ಶರಣಪ್ಪ ಮೇತ್ರಿ, ತಾಲೂಕು ಅಧ್ಯಕ್ಷ ಪೋಗಲ ವೀರೇಶ ರಡ್ಡಿ, ಜಿಲ್ಲಾ ಆಟೋ ಚಾಲಕರ ಘಟಕದ ಅಧ್ಯಕ್ಷ ಶಿವು, ಉಪಾಧ್ಯಕ್ಷ ಚನ್ನಬಸವ, ಭಗತ್ ಸಿಂಗ್ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ ದಾಸ, ಆಟೋ ರಘು, ನರಸಿಂಹಲು ಜೋಗಿ, ವಿ.ಮಲ್ಲಪ್ಪ ಸೇರಿದಂತೆ ಇನ್ನಿತರರು ಇದ್ದರು.

Leave a Comment