ವಿವಿಧ ಬೇಡಿಕೆಗಾಗಿ 17 ರಂದು ಜೇವರ್ಗಿಯಲ್ಲಿ ರಸ್ತೆ ತಡೆ

ಕಲಬುರಗಿ, ಜ. 11: ರೈತರ ಸಾಲಾ ಮನ್ನಾ, ವಿಮೆಯಲ್ಲಿ ತಾರತಮ್ಯ, ಪುರಸಭೆ ನೌಕರರ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಜ. 17 ರಂದು ಬೆಳಿಗ್ಗೆ 10 ಗಂಟೆಗೆ ನಮ್ಮ ಅಭಿಮಾನಿ ಬಳಗದಿಂದ ಜೇವರ್ಗಿ ಪಟ್ಟಣದಲ್ಲಿ ರಸ್ತೆ ತಡೆ ನಡೆಸಲು ತಿರ್ಮಾನಿಸಲಾಗಿದೆ ಎಂದು ಅಶೋಕ ಸಾಹುಕಾರ ಗೋಗಿ ತಿಳಿಸಿದರು.
ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಎಕರೆಗೆ ಒಬ್ಬ ರೈತನಿಗೆ 8 ಸಾವಿರ ಹಾಗೂ ಇನ್ನೊಬ್ಬ ರೈತನಿಗೆ 90 ಸಾವಿರ ಬೆಳೆ ಪರಿಹಾರ ನೀಡಲಾಗಿದೆ. ಇಂತಹ ತಾರತಮ್ಯದಲ್ಲಿ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ. ಅವ್ಯವಹಾರದಿಂದ ಬಡ ರೈತರಿಗೆ ಅನ್ಯಾಯ ಮಾಡಿದಂತಾಗಿಲ್ಲವೇ ಎಂದು ಪ್ರಶ್ನಿಸಿದ ಅವರು ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ರೈತರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಬೆಸರ ವ್ಯಕ್ತ ಪಡಿಸಿದರು.
ಪುರಸಭೆಯಲ್ಲಿನ ದಿನಗೂಲಿ ನೌಕರರನ್ನು ವಿನಾಃಕಾರಣ ಕೆಲಸದಿಂದ ತಗೆಯಲಾಗಿದೆ. ಪಟ್ಟಣದಲ್ಲಿ ಸ್ವಚ್ಛತೆ ಸರಿಯಾಗಿ ಆಗುತ್ತಿಲ್ಲ ಎಂದು ಕಳವಳ ವ್ಯಕ್ತ ಪಡಿಸಿದ ಅವರು ತಕ್ಷಣ ಪುರಸಭೆಯ ನೌಕರರನ್ನು ಮರುನೇಮಕ ಮಾಡಿಕೊಳ್ಳಬೇಕು. ಸರಕಾರಿ ಜಮೀನು ತಾಲೂಕಿನಲ್ಲಿ ಸಾವಿರಾರು ಎಕರೆ ಇದೆ. ಅನಧಿಕೃತ ಸಾಗುವಳಿ ಮಾಡುವವರಿಂದ ಸರಕಾರಿ ಜಮೀನು ಹಿಂದಕ್ಕೆ ಪಡೆದುಕೊಳ್ಳಬೇಕು. ಕೃಷ್ಟ ಭಾಗ್ಯ ಜಲ ನಿಗಮದಿಂದ ಕೈಗೊಂಡಿರುವ ಕಾಲುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿವೆ. ಕೆಲವು ಹಾಳಾಗಿ ಹೋಗಿವೆ. ಕೂಡಲೆ ಕಾಮಾಗಾರಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಲಾಗುವದು ಎಂದು ಅಶೋಕ ಸಾಹುಕಾರ ಗೋಗಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ, ಬಾಬು ವಾಲಿ, ಆಕಾಶ, ಗುರುರಾಜ, ಯಂಕಪ್ಪ ಅಶೋಕ ಹಾಗೂ ಇತರರು ಇದ್ದರು. …

Leave a Comment