ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ ಮೇ.29-ಕೋವಿಡ್-19 ಮಹಾಮಾರಿಯಿಂದ ತೊಂದರೆಗೆ ಒಳಪಟ್ಟು  ವಲಸೆ ಕಾರ್ಮಿಕರು, ಬಡವರು ಸಂಕಷ್ಟದಲ್ಲಿದ್ದು ವಿವಿಧ ಬೇಡಿಕೆಗಳಾದ ವಲಸೆ ಕಾರ್ಮಿಕರು, ಬಡವರು, ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾದ ಪ್ರಯಾಣವನ್ನು ಖಾತ್ರಿಪಡಿಸಿ,ವಲಸೆ ಕಾರ್ಮಿಕರು, ಅವರ ಮಕ್ಕಳು ಮತ್ತು ಕುಟುಂಬದವರಿಗೆ ಯೋಗ್ಯವಾದ ಆಹಾರ, ವಸತಿ ವೈದಕೀಯ ಚಿಕತ್ಸೆಯನ್ನು ಖಾತ್ರಿಪಡಿಸಿ ಮತ್ತು ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳದಂತೆ ಕ್ರಮ ಕೈಗೊಳ್ಳಿ..ಬಡ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಸೂಕ್ತವಾದ ಹಣಸಹಾಯವನ್ನು  ನೀಡಿ,.ಕೌಟುಂಬಿಕ ದೌರ್ಜನ್ಯಗಳನ್ನು ತಡೆಗಟ್ಟಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಿ ,ಮದ್ಯಮಾರಾಟವನ್ನು ಶಾಶ್ವತವಾಗಿ ನಿಲ್ಲಿಸಿ,ಆಶಾ ಕಾರ್ಯಕರ್ತೆಯರು, ಐಸಿಡಿಎಸ್, ಬಿಸಿಯೂಟದವರಿಗೆ ಹಾಗು ಇನ್ನಿತರ ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯವನ್ನು ನೀಡಿ,ಕೆಲಸದ ವೇಳೆಯನ್ನು 8 ರಿಂದ 10ಘಂಟೆಯವರೆಗೆ ವಿಸ್ತರಿಸಿರುವುದನ್ನು ನಿಲ್ಲಿಬೇಕೆಂದು ಅಖಿಲ ಭಾರತಮಹಿಳಾ ಸಾಂಸ್ಕೃತಿಕ ಸಂಘಟನೆ ಕಾರ್ಯಕರ್ತರು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ AIMSS ಧಾರವಾಡ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಧುಲತಾ ಗೌಡರ್, ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮೀ ದೇವತ್ಕಲ್, ಜಿಲ್ಲಾ ಉಪಾಧ್ಯಕ್ಷರಾದ ಗಂಗೂಬಾಯಿ ಕೊಕರೆ, ಜಿಲ್ಲಾ ಜಂಟಿಕಾರ್ಯದರ್ಶಿ ದೇವಮ್ಮ, ಇತರೆ ಸಂಘಟನಕಾರರಾದ ಭಾಗ್ಯಶ್ರೀ, ರಜಿಯಾ ಭಾಗವಹಿಸಿದ್ದರು.

Share

Leave a Comment