ವಿವಿಧ ಪ್ರದೇಶಗಳಿಗೆ ಮೇಯರ್ ದಿಢೀರ್ ಭೇಟಿ

ಬೆಂಗಳೂರು, ಜ. ೬- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಶನಿವಾರ ರಾತ್ರಿ ನಗರದ ವಿವಿಧ ಭಾಗಗಳಿಗೆ ದಿಢೀರ್ ಭೇಟಿ ನೀಡಿ ಸ್ವಚ್ಛತಾ ಕಾರ್ಯ ಹಾಗೂ ವಿದ್ಯುತ್ ದೀಪಗಳ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.
ಸ್ಯಾಂಕಿಟ್ಯಾಂಕ್ ರಸ್ತೆ, ಯಶವಂತಪುರ, ಪಶ್ಚಿಮಕಾರ್ಡ್ ರಸ್ತೆ, ವಸಂತನಗರ, ಅರಮನೆ ರಸ್ತೆಗಳಲ್ಲಿ ಪರಿಶೀಲನೆ ಕೈಗೊಂಡರು. ಈ ಸಂದರ್ಭದಲ್ಲಿ ಅರಮನೆ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಿಬಿಎಂಪಿ ಇಂಜಿನಿಯರ್‌ಗಳು, ಅರಣ್ಯ ಘಟಕದ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

Leave a Comment