ವಿವಿಧ ಜಾನಪದ ಕಲೆಗಳ ಪ್ರದರ್ಶನ

ಹಿರಿಯೂರಿನಲ್ಲಿ ಸೆ-9 ರಂದು ತಾಲ್ಲೂಕು ಗೊಲ್ಲರ ಸಂಘದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು. ಇದರ ಅಂಗವಾಗಿ ಶ್ರೀ ಕೃಷ್ಣನಿಗೆ ವಿಶೇಷವಾಗಿ ಅಲಂಕರಿಸಿದ ಭವ್ಯ ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣ ಗೆಯಲ್ಲಿ ಕೊಂಡೊಯ್ಯಲಾಗಿದೆ. ಮೆರವಣ ಗೆಯಲ್ಲಿ ಜಾನಪದ ಕಲಾ ಮಂಡಲದ ಕಲಾ ತಂಡಗಳಾದ ವೀರಗಾಸೆ, ನಂದಿಕೋಲು, ಕೀಲು ಕುದುರೆ, ನಾಸಿಕ್ ಡೋಲ್, ಭಜನೆ, ಕೋಲಾಟ ತಂಡಗಳು ಭಾಗವಹಿಸಿ ನಗರದ ವೇದಾವತಿ ಬಡಾವಣೆಯಿಂದ ಸಂಚರಿಸಿ ಜನಮನ ತಣ ಸಿದವು. ಸುಮಾರು ಹತ್ತು ಸಾವಿರ ಜನ ಮೆರವಣ ಗೆ ವೀಕ್ಷಿಸಿ ಸಂತೋಷಿಸಿದರು.
ಖಾಸಾಬೇಡರಪಡೆ ಪ್ರದರ್ಶನ
ಚಳ್ಳಕೆರೆಯಲ್ಲಿ ಶಿಕ್ಷಕರ ದಿನಾಚರಣೆ ಸೆ-5 ರಂದು ಡಾ|| ಸರ್ವಪಲ್ಲಿ ರಾಧಾಕೃಷ್ಣನ ಭಾವಚಿತ್ರ ಇರಿಸಿ ಶಿಕ್ಷಕರ ಜಯಂತಿ ಆಚರಿಸಲಾಯಿತು ತಾಲ್ಲೂಕು ಶಿಕ್ಷಕರ ಸಂಘ ಏರ್ಪಡಿಸಿದ ಮೆರವಣ ಗೆಯಲ್ಲಿ ತಾಲ್ಲೂಕಿನ ಶಿಕ್ಷಕ-ಶಿಕ್ಷಕಿಯರು, ಗೊಂಬೆಕುಣ ತ, ತ್ರಾಶ್ ವಾದ್ಯ, ಖಾಸಾಬೇಡರಪಡೆ ಕುಣ ತ, ತಮಟೆವಾದ್ಯ ಪ್ರದರ್ಶಿಸಲಾಯಿತು. ಜಿಲ್ಲಾ ಜಾನಪದ ಕಲಾ ಮಂಡಲದ ಕಲಾವಿದರಾದ ಜಿ.ಗಿರೀಶ್, ಗೋವಿಂದಪ್ಪ, ಎಸ್.ರಾಜಪ್ಪ, ಆರ್.ಅಭಿಲಾಶ್, ಆರ್.ಅಮೋಘವರ್ಷ, ಆರ್.ಅರುಣ್‍ಕುಮಾರ್, ಅಜೇಯ, ಗಿರಿತಿಮ್ಮಪ್ಪ, ಎಸ್.ಉಮಾಪತಿ, ಮಧುಸೂಧನ, ಕೆಂಚೇಶ್, ದರ್ಶನ, ಹನುಮಂತಪ್ಪ, ದರ್ಶನ, ಭುವನ ಇವರುಗಳು ಖಾಸಾಬೇಡರ ಪಡೆ ಜಾನಪದ ಕಲೆಯನ್ನು ಪ್ರದರ್ಶಿಸಿದರು. ಚಳ್ಳಕೆರೆ ನಗರದ ವಿವಿಧ ಬಡಾವಣೆಯಲ್ಲಿ ಸುಮಾರು ಹತ್ತು ಸಾವಿರ ಜನ ಪ್ರೇಕ್ಷಕರು ಈ ಮೆರವಣ ಗೆ ಕಾರ್ಯಕ್ರಮ ವೀಕ್ಷಿಸಿ ಸಂತೋಷಿಸಿದರು.

Leave a Comment