ವಿವಿಧ ಕಾಮಗಾರಿಗಳಿಗೆ ಚಾಲನೆ

ರಾಯಚೂರು.ಜ.17- ನಗರದ ಮಂಗಳವಾರಪೇಟೆಯ ವಾರ್ಡ್ ನಂ. 14 ಮತ್ತು ಅರಬ್ ಮೊಹಲ್ಲಾ ವಾರ್ಡ್ ನಂ.32 ರಲ್ಲಿ ಅಲ್ಪ ಸಂಖ್ಯಾತರ ಯೋಜನೆ ಅಭಿವೃದ್ಧಿಯಡಿಯಲ್ಲಿ 30 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜ ಚಾಲನೆ ನೀಡಿದರು.
ಅಲ್ಪಸಂಖ್ಯಾತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಈ ಬಡಾವಣೆಯಲ್ಲಿ ಅವರ ವಿಶೇಷ ಯೋಜನೆಯಡಿಯಲ್ಲಿ ಬಿಡುಗಡೆಯಾದ 30 ಲಕ್ಷ ರೂ. ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಯಣ್ಣ, ನೂರುದ್ದಿನ್, ಸಾಜೀದ್ ಸಮೀರ್, ಬಿ.ರಮೇಶ, ಸುನಿಲ, ತಿಮ್ಮಾರೆಡ್ಡಿ, ಅಫ್ಜಲ್ ಅಲಿ, ಮುದಾಸಿರ್ ಮುಕ್ರಂ, ವಹೀದ್ ಬಾಷ, ತಿಮ್ಮಪ್ಪ ನಾಯಕ, ಹರಿಬಾಬು, ಜಿ.ಶಿವಮೂರ್ತಿ, ಅಬ್ದುಲ್ ಕರೀಂ, ರುದ್ರಪ್ಪ ಅಂಗಡಿ, ಜಾವೀದ್ ಉಲ್ ಹಕ್, ಮಹಮದ್ ಶಾಲಂ, ಕೆ.ಅಸ್ಲಾಂ ಪಾಷ, ಕೆ.ಇ.ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment