ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಸದಸ್ಯರ ನೇಮP

ಬೆಂಗಳೂರು, ಅ ೧೬- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೆರವಾಗಿದ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಸರ್ಕಾರ ನೇಮಕ ಮಾಡಿದೆ.
ಒಟ್ಟು ೧೫ ಅಕಾಡೆಮಿಗಳಿಗೆ ಸರ್ಕಾರ ಅಧ್ಯಕ್ಷರು, ಹಾಗೂ ಸದಸ್ಯರನ್ನು ನೇಮಕ ಮಾಡಿದೆ. ಕನ್ನಡ ಸಾಹಿತ್ಯ ಅಕಾಡೆಮಿಗೆ ಡಾ.ಬಿ.ವಿ. ವಸಂತ ಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಟಿ.ಎಸ್.ನಾಗಾಭರಣ, ಜಾನಪದ ಅಕಾಡೆಮಿಗೆ ಮಂಜಮ್ಮ ಜೋಗುತಿ, ಯಕ್ಷಗಾನ ಅಕಾಡೆಮಿಗೆ ಎಂ.ಎ.ಹೆಗಡೆ, ಬ್ಯಾರಿ ಸಾಹಿತ್ಯ ಅಕಾಡೆಮಿಗೆ ರಹೀಂ ಉಚ್ಚಿಲಾ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಉಳಿದಂತೆ ಅಧ್ಯಕ್ಷರು ಮತ್ತು ಸದಸ್ಯರ ವಿವರಗಳು
* ಕನ್ನಡ ಅಭಿವೃದ್ಧಿ ಪ್ರಾಧಿಕಾರ – ಟಿ.ಎಸ್.ನಾಗಾಭರಣ – ಅಧ್ಯಕ್ಷ
ಸದಸ್ಯರು – ಕಬ್ಬಿನಾಲೆ ವಸಂತ ಭಾರದ್ವಾಜ, ಡಾ.ವಿಜಯಲಕ್ಷ್ಮೀ ಬಾಳೆಕುಂದಿ, ರೋಹಿತ್ ಚಕ್ರ, ತೀರ್ಥ, ಅಬ್ದುಲ ರಹಮಾನ್ ಪಾಷಾ, ರಮೇಶ್ ಗುಬ್ಬಿಗೂಡ, ಸುರೇಶ ಬಡ್ಡಿಗೇರಾ, ಎನ್.ಆರ್.ವಿಶುಕುಮಾರ್,
* ಕುವೆಂಪು ಭಾಷಾ ಭಾರತಿ ಪ್ರಾಧಿಕಾರ- ಅಜಕುಳ ಗಿರೀಶ್ ಭಟ್ -ಅಧ್ಯಕ್ಷ
ಸದಸ್ಯರು – ಅಜ್ಜಂಪುರ ಮಂಜುನಾಥ, ಡಾ.ಮಾಧವ ಪೇರಾಜೆ, ಡಾ. ಷಣ್ಮುಗ, ಡಾ.ಎಂ.ಎಸ್.ಚೈತ್ರ, ಡಾ.ಡಂಕಿನ್ ಜಳಕಿ, ಗಿರೀಜ ಶಂಕರ್,
* ಕನ್ನಡ ಸಾಹಿತ್ಯ ಅಕಾಡೆಮಿ – ಅಧ್ಯಕ್ಷ ಡಾ. ಬಿ.ವಿ. ವಸಂತ ಕುಮಾರ,
ಸದಸ್ಯರು – ಜಿನದತ್ತ ಹಡಗಲಿ, ಛಾಯಾ ಭಗವತಿ, ರೋಹಿಣಾಕ್ಷ ಕ್ಷೀರವಾಲು, ಸಂತೋಷ್ ತಮ್ಮಯ್ಯ, ಡಾ. ಬಿ.ಎಂ. ಶರಭೇಂದ್ರ ಸ್ವಾಮಿ, ಪಾರ್ವತಿ ಪಿಟ್ಟಗಿ, ಪ್ರೊ. ಕೃಷ್ಣೇಗೌಡ, ಪ್ರೊ. ಎನ್.ಎಸ್.ತಾರಾನಾಥ್, ಡಾ.ವೈ.ಸಿ. ಭಾನುಮತಿ
* ನಾಟಕ ಅಕಾಡೆಮಿ – ಭೀಮ ಸೇನಾ – ಅಧ್ಯಕ್ಷ
ಸದಸ್ಯರು – ಎಂ.ಕೆ. ಮಠ, ಪ್ರೇಮಾ ಬಾದಾಮಿ, ಪ್ರಭುದೇವ ಕಪ್ಪಲಗ, ವಿನೋದಾ ಅಂಬೇಕರ್, ಶಿವಪ್ಪ ಭರಮ್ಮಪ್ಪ ಅದರಗುಂಚಿ, ಜೋಸೆಫ್ ಡಾ.ಎಂ.ಗುಣಶೀಲನ್,
ಕೆ.ಆರ್.ಪ್ರಕಾಶ್, ಟಿ.ಎ.ರಾ. ಶಿವಯ್ಯ, ನಾಗರಾಜ ರಾವ್ ಕಲ್ಕಟೆ, ಯಶವಂತರಾವ್ ಸರ್ ದೇಶಪಾಂಡೆ, ವೈಧ್ಯನಾಥ ಬಿರದಾರ್, ಪಿ.ರಾಜಾರಾಂ,
* ಸಂಗೀತ ನೃತ್ಯ ಅಕಾಡೆಮಿ – ಆನೂರು ಅನಂತ ಕೃಷ್ಣ ಶರ್ಮಾ -ಅಧ್ಯಕ್ಷ
ಸದಸ್ಯರು – ಡಾ.ವೀರಣ್ಣ ಪತ್ತಾರ, ಡಾ.ನಿರುಪಮ ರಾಜೇಂದ್ರ, ಶಂಕರ್ ಶಾನುಭಾಗ್, ಸುಜೇಂದ್ರ ಬಾಬು, ರಾಜಗೋಪಾಲ್, ಹೊಸಳ್ಳಿ ವೆಂಕಟರಾಮ್, ಶಾರದ ಮಣಿ ಶೇಖರ್, ರಮ್ಯ ಸೂರಜ್, ಹೇಮ ವಾಗ್ಮೋರೆ, ರೇಖಾ ಪ್ರೇಮ್ ಕುಮಾರ್, ಪದ್ಮಿನಿ ಓಕ್, ಕಿಕ್ಕೇರಿ ಕೃಷ್ಣಮೂರ್ತಿ

Leave a Comment