ವಿವಾಹಿತ ನಾಪತ್ತೆ

ಮಂಗಳೂರು, ಸೆ.೨೩- ವಿಟ್ಲ ಮುಡ್ನೂರು ಗ್ರಾಮದ ಬೋಳಿಗದ್ದೆ ನಿವಾಸಿ ತಾರನಾಥ(೪೫) ಎಂಬವರು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಬೋಳಿಗದ್ದೆ ನಿವಾಸಿ, ತಾರನಾಥ ಸಹೋದರ ಆನಂದ ಎಂಬವರು ಈ ದೂರು ನೀಡಿದ್ದಾರೆ.
ತಾರನಾಥ ಎಂಬವರು ಬೆಳ್ಳಾರೆ ಪರಿಸರದಲ್ಲಿ ಆಟೋ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ವಿಟ್ಲ ಮುಡ್ನೂರು ಗ್ರಾಮ ಬೋಳಿಗದ್ದೆ ಎಂಬಲ್ಲಿ ವಾಸವಾಗಿದ್ದರು. ಎರಡು ತಿಂಗಳುಗಳ ಹಿಂದೆ ತಾರನಾಥ ತನ್ನ ಪತ್ನಿಯ ತವರು ಮನೆ ಬೆಳ್ಳಾರೆಗೆ ಎಂದು ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈತನ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಠಾಣೆಗೆ ತಿಳಿಸುವಂತೆ ಪೊಲೀಸ್ ಪ್ರಕಟನೆಯಲ್ಲಿ ಕೋರಲಾಗಿದೆ.

Leave a Comment