ವಿವಾಹಕ್ಕೆ ಒಪ್ಪದ ಪ್ರಿಯಕರ ಕಬ್ಬನ್‌ಪಾರ್ಕ್‌ನಲ್ಲಿ ಪ್ರೇಯಸಿ ನೇಣು

ಬೆಂಗಳೂರು,ಆ.೧೯-ಪ್ರೀತಿಸಿದ ಹುಡುಗ ವಿವಾಹವಾಗಲು ನಿರಾಕರಿಸಿದ್ದರಿಂದ ನೊಂದ ನೇಪಾಳಿ ಮೂಲದ ಯುವತಿ ಕಬ್ಬನ್ ಪಾರ್ಕ್‌ನ ಮರವೊಂದಕ್ಕೆ ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಿಸೋಜಾ ಲೇಔಟ್‌ನ ಸಂತೋಷಿ(೨೧)ಆತ್ಮಹತ್ಯೆ ಮಾಡಿಕೊಂಡವರು,ವಿಠ್ಠಲ್ ಮಲ್ಯ ರಸ್ತೆಯ ಲೈಮ್‌ಲೈಟ್ ಸ್ಪಾನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಆರ್‌ಟಿ ನಗರದ ನರೇಶ್ ಎಂಬಾತನನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಇಬ್ಬರ ಮನೆಯವರಿಗೆ ವಿಷಯ ತಿಳಿದು ವಿವಾಹಕ್ಕೆ ಒಪ್ಪಿರಲಿಲ್ಲ,ಆದರೂ ಇಬ್ಬರೂ ಸುತ್ತಾಡುತ್ತಾ ಮದುವೆಗೆ ಮುಂದಾಗಿದ್ದರು ಇತ್ತೀಚಿಗೆ ನರೇಶ್ ವಿವಾಹವಾಗುವುದಿಲ್ಲ ಎಂದು ಹೇಳಿದ್ದರಿಂದ ಸಂತೋಷಿ ಆಕ್ರೋಶಗೊಂಡು ಸೆಕೈರಿಟಿ ಗಾರ್ಡ್ ಆಗಿದ್ದ ತಂದೆ ಕಬಿರಾಜ್ ವಿಷಯ ತಿಳಿಸಿದ್ದರು.
ನಿನ್ನೆ ಮಧ್ಯಾಹ್ನ ಕಬ್ಬನ್‌ಪಾರ್ಕ್ ಬಂದಿದ್ದ ಸಂತೋಪಿ ಹಾಗೂ ನರೇಶ್ ಇಬ್ಬರ ನಡುವೆ ವಿವಾಹವಾದ ವಿಚಾರವಾಗಿ ಜೋರು ಜಗಳವಾಗಿತ್ತು ಸ್ಥಳೀಯರು ಜಗಳ ಬಿಡಿಸಿ ಇಬ್ಬರಿಗೂ ಬೈದು ಕಳುಹಿಸಿದ್ದರು ಮನೆಗೆ ಹೋಗಿದ್ದ ಸಂತೋಪಿ ನರೇಶ್ ಜೊತೆ ವಿವಾಹಮಾಡಿ ಎಂದು ಪಟ್ಟು ಹಿಡಿದಿದ್ದಳು ತಂದೆ ಕಬಿರಾಜ್ ನಾವು ಹೊರಗಿನವರು ಇಲ್ಲಿನವರ ಜೊತೆ ಸಂಬಂಧ ಬೇಡ ನರೇಶ್‌ನನ್ನು ಬಿಟ್ಟು ಬಿಡು ಇಲ್ಲದಿದ್ದರೆ ಮನೆಯಲ್ಲಿ ಇರಬೇಡ ಎಲ್ಲಿಗಾದರೂ ಹೋಗು ಎಂದು ಬೈದಿದ್ದರು.
ಇದರಿಂದ ನೊಂದ ಸಂತೋಷಿ ತಡರಾತ್ರಿ ಕಬ್ಬನ್ ಪಾರ್ಕ್‌ಗೆ ಬಂದು ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಯುವತಿಯ ದೇಹ ನೇತಾಡುತ್ತಿರುವುದನ್ನು ಇಂದು ಬೆಳಗ್ಗೆ ಉದ್ಯಾನದ ಸಿಬ್ಬಂದಿ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯು ಸಂತೋಷಿ(೧೮)ಎಂದು ಕಂಡುಬಂದಿದ್ದು ತಂದೆ ತಾಯಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ಆತ್ಮಹತ್ಯೆಯ ಕಾರಣ ತಿಳಿದುಬಂದಿದೆ.
ಸಂತೋಪಿ ಸಾವಿಗೆ ನರೇಶ್ ಕಾರಣನಾಗಿದ್ದು ಆತನನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ಅವರ ತಂದೆ ಕಬಿರಾಜ್ ದೂರು ನೀಡಿದ್ದಾರೆ ಪ್ರಕರಣ ದಾಖಲಿಸಿರುವ ಕಬ್ಬನ್‌ಪಾರ್ಕ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment