ವಿವಾದಿತ ಆಂಧ್ರ ಕರ್ನಾಟಕ ಗಡಿ ಸರ್ವೆ ಮುಕ್ತಾಯ

ಬಳ್ಳಾರಿ, ಆ.8: ಈ ತಿಂಗಳ ಅಂತ್ಯದೊಳಗೆ ಆಂಧ್ರ ಮತ್ತು ಕರ್ನಾಟಕದ ನಡುವಿನ ವಿವಾದಿತ ಪ್ರದೇಶದ ಅಂತರರಾಜ್ಯ ಗಡಿಯನ್ನು ಗುರುತಿಸುವ ಸರ್ವೇ ಕಾರ್ಯ ನಡೆಸಿ ವರದಿ ನೀಡಲು ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಅಧಿಕಾರಿಗಳು ಸರ್ವೇ ಕಾರ್ಯ ನಿನ್ನೆ ಮುಗಿಸಿದ್ದು. ಆಂಧ್ರ ಪ್ರದೇಶದ ಭಾಗದಲ್ಲಿ 21 ಮತ್ತು ಕರ್ನಾಟಕದ ಭಾಗದಲ್ಲಿ 5 ಗಡಿ ಗುರುತು ಕಲ್ಲುಗಳನ್ನು ಸರ್ವೇ ತಂಡ ಪತ್ತೆ ಮಾಡಿದೆ.

ಕಳೆದ ಹತ್ತಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಎರೆಡು ರಾಜ್ಯಗಳ ಗಡಿ ವಿವಾದ ಬಗೆಹರಿಸುವಂತೆ ಅನೇಖ ಬಾರಿ ನ್ಯಾಯಾಲಯದಿಂದ ಸೂಚನೆ ನೀಡಿದ್ದರೂ. ಎರೆಡು ರಾಜ್ಯಗಳ ಅಧಿಕಾರಿಗಳು ಒಮ್ಮತಕ್ಕೆ ಬರದೇ ಇದ್ದ ಕಾರಣ ನ್ಯಾಯಾಲಯ ಈಗ ಭಾರತೀಯ ಸರ್ವೇಕ್ಷಣಾಲಯದ ಅಧಿಕಾರಿಗಳನ್ನು ಒಳಗೊಂಡು ಸರ್ವೇ ನಡೆಸಿ ವರದಿ ನೀಡಲು ಸೂಚಿಸಿತ್ತು.

ಈ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸರ್ವೇ ನಡೆಸಿದ ಭಾರತೀಯ ಸರ್ವೇಕ್ಷಣಾಲ ಯದ ಡೈರೆಕ್ಟರ್ ಜನರಲ್ ಪವನ್‍ಕುಮಾರ್ ಪಾಂಡೆ, ಕರ್ನಾಟಕದ ಸರ್ವೆ ಸೆಟ್ಲ್‍ಮೆಂಟ್ ಕಮಿಷನರ್ ಮನೀಷ್ ಮೌದ್ಗಿಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಸ್ವಜಿತ್ ಮಿಶ್ರಾ ಅವರೊಂದಿಗೆ ಆಂಧ್ರದ ಸರ್ವೇಕ್ಷಣಾ ಇಲಾಖೆ, ಕಂದಾಯ ಅಧಿಕಾರಿಗಳು ಸೇರಿ ಸರ್ವೇ ಕಾರ್ಯ ನಡೆಸಿದ್ದರು.

ಅಂತರರಾಜ್ಯ ಗಡಿ ಗ್ರಾಮಗಳಾದ ಬಳ್ಳಾರಿ ತಾಲೂಕಿನ ಹೊನ್ನಳ್ಳಿ ಮತ್ತು ಸಂಡೂರು ತಾಲೂಕಿನ ತುಮಟಿ, ಆಂದ್ರ ಪ್ರದೇಶದ ಸಿದ್ದಾಪುರ, ಮಲಪನಗುಡಿ ನಡುವಿನ ಸರ್ವೇ ಕಲ್ಲುಗಳ ಸ್ಥಳಗಳನ್ನು ಗುರುತಿಸಿ ಜಿಪಿಎಸ್ ಅಳವಡಿಸಿ ಗಡಿ ಗುರುತುಗಳ ಪತ್ತೆ ಹಚ್ಚಲಾಗಿದೆ.

ಈ ಸರ್ವೇ ಕುರಿತ ಅಧಿಕಾರಿಗಳ ಸಭೆ ಆ.10ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು ಬಹುತೇಕ 11 ರಂದು ಸಪ್ರೀಂ ಕೋೀರ್ಟಿಗೆ ವರದಿ ನೀಡುವ ಸಾಧ್ಯತೆ ಇದೆ.

Leave a Comment