ವಿರಾಟ್ ಜೊತೆ ಕಾಣಿಸಿಕೊಂಡ ಅನುಷ್ಕಾ

ಇಂಗ್ಲೆಂಡ್ ಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹುರಿದುಂಬಿಸಲು ಅವರ ಪತ್ನಿ ಅನುಷ್ಕಾ ಶರ್ಮಾ ಮೈದಾನದ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೌತಾಂಪ್ಟನ್ ‌ನ ದಿ ರೋಸ್ ಬೌಲ್ ನಲ್ಲಿ ಶನಿವಾರ, ಭಾರತ ತಂಡ ಅಫ್ಘಾನಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯ ವೀಕ್ಷಣೆಗೆ ಅನುಷ್ಕಾ ಆಗಮಿಸುತ್ತಾರೆ. ಈ ಮೂಲಕ ವಿರಾಟ್ ಅವರನ್ನು ಹುರಿದುಂಬಿಸುವ ಅನುಷ್ಕಾ ಪ್ರಯತ್ನವನ್ನು ನೋಡುವ ಸೌಭಾಗ್ಯ ಪ್ರೇಕ್ಷರದ್ದಾಗಲಿದೆ.

ಈಗಾಗಲೇ ಲಂಡನ್ ತಲುಪಿರುವ ಅನುಷ್ಕಾ ಅವರು ಲಂಡನ್ ಬೀದಿಯಲ್ಲಿ ವಿರಾಟ್ ಜತೆ ಸುತ್ತಾಟ ನಡೆಸಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಾರಿ ತಂಡದ ಸದಸ್ಯರೊಂದಿಗೆ ಕುಟುಂಬದ ಸದಸ್ಯರು 15 ದಿನ ಕಾಲ ಒಟ್ಟಿಗೆ ಇರಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅವಕಾಶ ನೀಡಿದೆ. ಎಂ.ಎಸ್. ಧೋನಿ ಜತೆ ಪತ್ನಿ ಸಾಕ್ಷಿ, ಶಿಖರ್ ಧವನ್ ಜತೆ ಆಯೇಷಾ, ರೋಹಿತ್ ಶರ್ಮಾ ಜತೆ ರಿತಿಕಾ ಇಂಗ್ಲೆಂಡ್ ನಲ್ಲಿ ಇದ್ದಾರೆ.

Leave a Comment