ವಿಮ್ಸ್ ಹೊರ ಗುತ್ತಿಗೆ ನೌಕರರನ್ನು ಮುಂದುವರಿಸಲು ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ, ಜು.11: ನಗರದ ವಿಮ್ಸ್ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ 180 ಕ್ಕೂ ಹೆಚ್ಚು ಹೊರ ಗುತ್ತಿಗೆ ನೌಕರರನ್ನು ಮುಂದುವರಿಸಬೇಕೆಂದು ಆಗ್ರಹಿಸಿ ಇಂದು ವಿಮ್ಸ್ ಆವರಣದಲ್ಲಿ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.

ಸದ್ಯ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 529 ಜನ ಆಯಾ, ಕಸಬಳಿಯುವ ಮೊದಲಾದ ಗ್ರೂಪ್ ಡಿ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.

ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮಂಜುಳಾ ಅವರು, ವಿಮ್ಸ್‍ನ ನಿರ್ದೇಶಕರಿಗೆ ಪತ್ರ ಬರೆದು 332 ಜನರನ್ನು ಮಾತ್ರ ಹೊರ ಗುತ್ತಿಗೆಯಲ್ಲಿ ಪಡೆಯಿರಿ ಎಂದು ಹೇಳಿದ್ದಾರೆ. ಈ ಬಗ್ಗೆ ವಿಮ್ಸ್‍ನ ನಿರ್ದೇಶಕ ಕೃಷ್ಣಸ್ವಾಮಿ ಅವರು ಈ ಕುರಿತು ತಮ್ಮ ಸಿಬ್ಬಂದಿ ಜೊತೆ ಚರ್ಚೆ ಮಾಡಿದ್ದಾರೆ.

ಈ ವಿಷಯ ತಿಳಿದ ಹೊರ ಗುತ್ತಿಗೆ ನೌಕರರು ನಮ್ಮ 529 ಜನರಲ್ಲಿ 180 ಜನರನ್ನು ತೆಗೆಯುತ್ತಾರೆ. ಹಾಗೆ ತೆಗೆಯುವಾಗ ಯಾರನ್ನು ತೆಗೆಯುತ್ತಾರೆ. ಕಳೆದ ಹತ್ತಾರು ವರ್ಷಗಳಿಂದ ನಾವು ಕಡಿಮೆ ಸಂಬಳಕ್ಕೆ ಮಾಡುತ್ತಾ ಬಂದಿದ್ದು, ಇದನ್ನೇ ನಂಬಿಕೊಂಡಿದ್ದೇವೆ. ಹೀಗಿರುವಾಗ ನಮ್ಮನ್ನು ತೆಗೆದರೆ ಹೇಗೆ ಎಂದು ಇಂದು ಕೆಲಸಕ್ಕೆ ಹೋಗದೆ ಪ್ರತಿಭಟನೆ ನಡೆಸಿದ್ದಾರೆ.

Leave a Comment