ವಿಮ್ಸ್ ನಲ್ಲಿ ಫೀವರ್ ಕ್ಲೀನಿಕ್ ಆರಂಭ

ಬಳ್ಳಾರಿ, ಏ.3: ಕೊರೋನಾ ಭೀತಿ ಹಿನ್ನಲೆಯಲ್ಲಿ ಜ್ವರ, ಕೆಮ್ಮು‌ ನೆಗಡಿಯಿಂದ ಬಳಲುವ ಜನರ ತಪಾಸಣೆಗಾಗಿ ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಫೀವರ್ ಕ್ಲಿನಿಕ್ ನ್ನು‌ ನಿನ್ನೆಯಿಂದ ಆರಂಭಿಸಲಾಗಿದೆ.

ಸಾಮಾನ್ಯ ನೆಗಡಿ‌ ಜ್ವರದವರು. ಜೊತೆಗೆ ಸೋಂಕು‌ ಇರುವವರು ಸಹ ಹೆಚ್ಚಿನದಾಗಿ ಆಸ್ಪತ್ರೆಗೆ ಬರುತ್ತಿದ್ದರು. ಅದಕ್ಕಾಗಿ‌ ವಿಮ್ಸ್ ನ‌ ಸಭಾಂಗಣದಲ್ಲಿ ಪ್ರತ್ಯೇಕ ಕ್ಲೀನಿಕ್ ಆರಂಭಿಸಿ. ಇಲ್ಲಿಗೆ ಬರುವವರ ತಪಾಸಣೆ ನಡೆಸುತ್ತಿದೆ. ಸಾಮಾನ್ಯ ಜ್ವರ, ನೆಗೆಡಿ ಮತ್ತು ಕೆಮ್ಮು ಕಂಡು ಬಂದವರಿಗೆ ಪರಿಶೀಲನೆ ನಡೆಸಿ ಔಷಧಿ ನೀಡಿ ಕಳಿಸುತ್ತಿದೆ.

ಇದೇ ಸಂದರ್ಭದಲ್ಲಿ ಇಲ್ಲಿಗೆ ಬಂದವರ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದು. ಬೇರೆ ಊರುಗಳಿಂದ ಬಂದಿದ್ದರೆ, ಸೋಂಕಿತರ ಸಂಪರ್ಕ ಹೊಂದಿದ್ದರೆ ಅಂತಹವರಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಕ್ವರಂಟೈನ್ ಮಾಡಲಾಗುತ್ತದೆ ಎಂದು ಸಂಜೆವಾಣಿಗೆ ವಿಮ್ಸ್ ನಿರ್ದೇಶಕ ಡಾ.ದೇವಾನಂದ್ ತಿಳಿಸಿದ್ದಾರೆ.
ನಿನ್ನೆಯಿಂದ ಎರೆಡು‌ನೂರಕ್ಕೂ ಹೆಚ್ಚು ಜನ ಇಲ್ಲಿ ತಪಾಸಣೆಗೆ ಒಳಗಾಗಿದ್ದಾರೆ.

Leave a Comment