ವಿಮಾ ನೌಕರರ ಸಂಘ : 29 ನೇ ಸಮ್ಮೇಳನ ಕಾರ್ಯಕ್ರಮ

ರಾಯಚೂರು.ನ.09- ವರ್ಷದಿಂದ ವರ್ಷಕ್ಕೆ ಆರ್ಥಿಕ ಹಿಂಜರಿತ ಉಂಟಾಗಿ ಶೇ.40 ರಷ್ಟು ನಿರುದ್ಯೋಗ ಸಮಸ್ಯೆ ಎದುರಾಗುತ್ತಿದೆಂದು ಎಸ್‌ಸಿಝೀಐಇಎಫ್ ಕಾರ್ಯದರ್ಶಿ ಜೆ.ಸುರೇಶ ಅವರು ಹೇಳಿದರು.
ಅವರಿಂದು ನಗರದ ಎಲ್‌ಐಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ, ವಿಮಾ ನೌಕರರ ಸಂಘದ 29 ನೇ ವಿಭಾಗೀಯ ಮಹಾ ಸಮ್ಮೇಳನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರದಲ್ಲಿ ವರ್ಷದಿಂದ ವರ್ಷಕ್ಕೆ ಆರ್ಥಿಕ ಹಿಂಜರಿತ ಆಗುತ್ತಿರುವುದರಿಂದ ಪ್ರತಿಶತ ಶೇ. 40ರಷ್ಟು ಜನ ನಿರುದ್ಯೋಗದಿಂದ ಬಳುತ್ತಿದ್ದು, ಇದರಿಂದ ರಾಷ್ಟ್ರದಲ್ಲಿ ಆರ್ಥಿಕ ಕುಸಿತ ಉಂಟಾಗುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲದೆ ಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ.
ಗಣಿತ ಶಾಸ್ತ್ರ ಪರಿವಿಲ್ಲದವರನ್ನು ರಾಷ್ಟ್ರದ ಹಣಕಾಸಿನ ಮಂತ್ರಿಯಾಗಿರುವುದು ದುರಂತ ವಿಷಯವಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನರನ್ನು ಮರೆಮಾಚುವ ಕೆಲಸ ಮಾಡುತ್ತಿದೆ. ರಾಮ ಜನ್ಮಭೂಮಿ ಮತ್ತು ಆರ್ಟಿಕಲ್ 370 ಕಲಂ ರದ್ದು ಮಾಡಿರುವುದು ಯಾರಿಗೆ ಲಾಭ ತಂದಿದೆಂದು ಆಪಾಧಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಂ.ಶರಣಗೌಡ, ಕ್ಲೈಮೆಂಟ್ ಎಕ್ಸ್‌ವೀರ ದಾಸ್, ಜಯತೀರ್ಥ, ಶ್ರೀಧರ್, ವೆಂಕಟೇಶ, ಕೃಷ್ಣಮೂರ್ತಿ, ಎಂ.ರವಿ, ಸುಬ್ರಮಣ್ಯಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment